ಮಂಗಳೂರು ಕಾಶೀ ಮಠದಲ್ಲಿ ಋಗುಪಾಕರ್ಮಾ

kashi mata web1
Published on

ಮಂಗಳೂರು: ಕಾಶೀ ಮಠ ಸಂಸ್ಥಾನದಲ್ಲಿ ನೂಲ ಹುಣ್ಣಿಮೆ (ಋಗುಪಾಕರ್ಮಾ) ಕಾರ್ಯಕ್ರಮ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರಿಂದ ಮಂಗಳವಾರ ನೆರವೇರಿತು.

ಆರಂಭದಲ್ಲಿ ಶ್ರೀಸಂಸ್ಥಾನದ ಆರಾಧ್ಯದೇವರಾದ ಶ್ರೀ ವ್ಯಾಸರಘುಪತಿ ದೇವರ ನಿರ್ಮಾಲ್ಯ ಪೂಜೆ ಬಳಿಕ ಸಂಸ್ಥಾನದ ದೇವರುಗಳಿಗೆ ಪೂಜಿಸಿದ ನೂಲು ತೊಡಿಸಲಾಯಿತು. ಬಳಿಕ ನೆರೆದ ಸಮಾಜದ ಭಕ್ತರಿಗೆ ನೂಲ ಹುಣ್ಣಿಮೆ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಚಾತುರ್ಮಾಸ ಸಮಿತಿ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ ಕಾಮತ್, ಕೋಶಾಧಿಕಾರಿ ಬಿ.ಆರ್.ಭಟ್, ಮುಖ್ಯ ಸಂಯೋಜಕ ಸುರೇಶ ವಿ.ಕಾಮತ್, ಯು. ಸುದರ್ಶನ್ ಮಲ್ಯ ಸಹಿತ ನೂರಾರು ಸಂಖ್ಯೆಯ ಭಜಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net