ಗಳಿಕೆಗಿಂತಲೂ ಕಾಯಕ ಮುಖ್ಯವಾಗಲಿ: ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಕಿವಿಮಾತು

Upanyasa)
Published on

ಮಂಡ್ಯ: ಯಾವುದೇ ವ್ಯಕ್ತಿಯಾದರೂ ಗಳಿಕೆಗಿಂತ ಕಾಯಕ ಮುಖ್ಯವಾಗಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಕಿವಿಮಾತು ಹೇಳಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವಜ್ಯೋತಿ ಕಾರ್ಯಕ್ರಮದ 130ನೇ ಆಧ್ಯಾತ್ಮಿಕ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಯಾವಾಗಲೂ ಸಹ ಕಾಯಕದಲ್ಲಿ ನಿರತರಾಗಿರಬೇಕು. ಇದಕ್ಕೆ ನಿದರ್ಶನ ಎಂಬಂತೆ ಐದಕ್ಕಿ ಲಕ್ಕಮ್ಮ ಮತ್ತು ಐದಕ್ಕಿ ಮಾರಯ್ಯ ಅವರ ಪ್ರಸಂಗವನ್ನು ವಿವರಿಸಿದರು.

ಸಂಘದ ಅಧ್ಯಕ್ಷ ಎಸ್.ನಾಗರಾಜು ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಬಸವ ತತ್ವ ಎಷ್ಟು ಪ್ರಸ್ತುತವಾಗಿದೆ ಎಂಬುದನ್ನು ನಾವು ಗಮನಿಸಬೇಕಿದೆ. ಇಂದಿನ ದಿನಮಾನಗಳಲ್ಲಿ ಧರ್ಮವಂತರು, ಭಕ್ತಿವಂತರು, ಗುರು ಮಠವನ್ನ ಗೌರವಿಸುವವರು ಅಲ್ಪ ಪ್ರಮಾಣಕ್ಕೆ ಕುಸಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚನ್ನಪಟ್ಟಣ ವಿರಕ್ತಮಠದ ಚರಮೂರ್ತಿ ಶಿವರುದ್ರಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕ ಅರುಣ್‌ಕುಮಾರ್, ಸಂಘದ ಉಪದ್ಯಕ್ಷರಾದ ಡಿ.ದ್ಯಾವಣ್ಣ, ನಿರ್ದೇಶಕರಾದ ಸಿ.ಎಂ ಪುಟ್ಟಬುದ್ದಿ, ಶಿವಕುಮಾರ್, ಶಾಂತಮ್ಮ, ಜಗದೀಶ್, ಮೋಹನ, ಉಪನ್ಯಾಸಕಿ ರಮ್ಯಾ ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net