ಸಿದ್ದಾಪುರ : ಜಿಲ್ಲಾ ಹಾಗೂ ವಿರಾಜಪೇಟೆ ತಾಲೂಕು ಮತ್ತು ಅಮ್ಮತ್ತಿಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಚೆನ್ನಯ್ಯನ ಕೋಟೆ ಸರ್ಕಾರಿ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ದಿ.ಎನ್. ರಾಮಕೃಷ್ಣ ಮತ್ತು ದಿ.ಬಿ.ಜಿ. ರಘುನಾಥ ನಾಯಕ ಜ್ಞಾಪಕಾರ್ಥ ಡಿ. 2 ರಂದು ಬೆಳಗ್ಗೆ 10ಕ್ಕೆ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ಸೇವೆಯಲ್ಲಿ ಪೂರ್ವಾಧ್ಯಕ್ಷರ ಸೇವೆ ಎಂಬ ವಿಷಯ ಕುರಿತು ಕನ್ನಡ ಉಪನ್ಯಾಸಕಿ ಉಮಾರಾಣಿ, ಕನ್ನಡ ರಾಜ್ಯೋತ್ಸವ ಕುರಿತು ಸಾಹಿತಿ ರಜಿತ ಕಾರ್ಯಪ್ಪ ಉಪನ್ಯಾಸ ನೀಡಲಿದ್ದಾರೆ. ಹೋಬಳಿ ಕಸಾಪ ಅಧ್ಯಕ್ಷ ಮಂಜುನಾಥ, ಮುಖ್ಯ ಶಿಕ್ಷಕಿ ಕೆ.ಎ.ಕಾವೇರಮ್ಮ ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ.ರಮೇಶ್, ವಿರಾಜಪೇಟೆ ಕಸಾಪ ಅಧ್ಯಕ್ಷ ರಾಜೇಶ ಪದ್ಮನಾಭ, ಚನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷ ಮೇಕೇರಿ ಅರುಣ್ ಕುಮಾರ್ ಇತರರು ಭಾಗವಹಿಸಲಿದ್ದಾರೆ.