

ಕಾರ್ಕಳ: ಎಲ್ಲ ಉಪನಿಷತ್ತುಗಳ ಸಾರ ಹೊಂದಿರುವ ಛಾಂದೋಗ್ಯ ಉಪನಿಷತ್ತು ಮೋಕ್ಷದೆಡೆಗೆ ಸಾಗಲು ಪೂರಕವಾಗುವ ವಿವಿಧ ಉಪಾಸನಾ ವಿಧಿಗಳನ್ನು ತಿಳಿಸುತ್ತದೆ ಎಂದು ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಹುಲ್ ರಾಜಶೇಖರ ಭಟ್ ಹೇಳಿದರು.
ಕಾಂತಾವರ ಕನ್ನಡ ಸಂಘ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಕಾಂತಾವರ ಅಲ್ಲಮಪ್ರಭು ಪೀಠದ ಸಹಯೋಗದಲ್ಲಿ ಕಾರ್ಕಳದ ಖಾಸಗಿ ಹೋಟೆಲ್‌ನಲ್ಲಿ ನಡೆದ ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮದಲ್ಲಿ ಛಾಂದೋಗ್ಯ ಉಪನಿಷತ್ತು ಕುರಿತು ಮಾತನಾಡಿದರು.
ಅ.ಭಾ.ಸಾ.ಪ.ದ ಗೌರವಾಧ್ಯಕ್ಷ ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಶಾರ್ವರಿ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ. ಸ್ವಾಗತಿಸಿದರು. ಜಯಶ್ರೀ ಆದಿರಾಜ ಅಜ್ರಿ ಅತಿಥಿಗಳನ್ನು ಪರಿಚಯಿಸಿದರು. ಮಿತ್ರಪ್ರಭಾ ಹೆಗ್ಡೆ ವಂದಿಸಿದರು. ಡಾ.ಸುಮತಿ ಪಿ. ನಿರೂಪಿಸಿದರು.