

ಮುಳಬಾಗಿಲು: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಗುರುವಾರ ನಗರದ ಸರ್ಕಾರಿ ಕಚೇರಿಗಳಿಗೆ, ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಗಳನ್ನು, ಕರ್ತವ್ಯ ಲೋಪ ಕಂಡು ಕೆಂಡಮಂಡಲರಾದರು.
ಇವರೊಂದಿಗೆ ಬಂದಿದ್ದ ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶ ಎನ್.ವಿ. ಅರವಿಂದ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಕ್ಷಣಾರ್ಧದಲ್ಲಿ ಕಚೇರಿಗಳ ಎಲ್ಲ ವಿಭಾಗಗಳಲ್ಲಿ ಸಿಬ್ಬಂದಿಯನ್ನು ತಪಾಸಣೆ ಮಾಡಿ, ಮೊಬೈಲ್ಗಳನ್ನು ವಶಕ್ಕೆ ಪಡೆದು ಫೋನ್ ಪೇ, ಗೂಗಲ್ಪೇ ಗಳ ವಹಿವಾಟು ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿ ಪ್ರಶ್ನೆಗಳ ಸುರಿಮಳೆಗೈದರು.
ಮೊದಲಿಗೆ ನಗರದ ಕೆಎಸ್ಆರ್ಟಿಸಿ ಪ್ರಯಾಣಿಕರ ತಂಗುದಾಣಕ್ಕೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲನೆ ನಡೆಸಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಶೌಚಗೃಹ, ಪ್ರಯಾಣಿಕರ ತಂಗುದಾಣದಲ್ಲಿನ ಅಂಗಡಿಗಳು, ನಂದಿನಿ ಪಾಲರ್ಗಳಲ್ಲಿ ಮಾರಾಟ ಮಾಡುತ್ತಿದ್ದ ಉತ್ಪನ್ನಗಳನ್ನು ಪರಿಶೀಲಿಸಿ ಅವಧಿ ಮೀರಿದ ವಸ್ತುಗಳ ಮಾರಾಟದ ಮಾದರಿ ವಶಪಡಿಸಿಕೊಂಡು ತನಿಖೆಗೆ ಸೂಚಿಸಿದರು.
ಲೋಕಾಯುಕ್ತ ಮಾಹಿತಿಯ ನಾಮಫಲಕಕ್ಕೆ ಕನ್ನಡ ನಾಡು&ನುಡಿ, ಸಾಹಿತ್ಯ ಕ್ಷೇತ್ರದ ದಿಗ್ಗಜರ ಭಾವಚಿತ್ರಗಳ ಫ್ಲೆಕ್ಸ್ಅನ್ನು ಅಂಟಿಸಿದ್ದು, ಲೋಕಾಯುಕ್ತ ಮಾಹಿತಿ ಮುಚ್ಚಲು ಇಂತಹ ದಿಗ್ಗಿಜರನ್ನು ಬಳಸಿಕೊಂಡಿರುವುದು ಎಷ್ಟು ಸರಿ, ಈ ಬಗ್ಗೆ ನೋಟಿಸ್ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ, ಕಚೇರಿಯ ಎರಡು ಮೂರು ಕಡೆ ಲೋಕಾಯುಕ್ತ ಕಚೇರಿಯ ಮಾಹಿತಿ ತಕ್ಷಣವೇ ಪ್ರಕಟಿಸಬೇಕೆಂದು ಸೂಚಿಸಿದರು.
ಇ&ಖಾತೆ ಮಾಡಲು 30 ರಿಂದ 40 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಇಖಾತೆ ಶಾಖೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಶಿಷ್ಟಾಚಾರ ಮತ್ತು ಜೇಷ್ಠ್ಠತೆಯ ಮಾಹಿತಿ ಸಂಗ್ರಹಿಸಿ ಇಲ್ಲಿ ನಡೆದಿರುವ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುತ್ತಿದಂತೆ ಅಲ್ಲಿನ ಅವ್ಯವಸ್ಥೆಯ ನರಕ ದರ್ಶನ ಕಂಡು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧ
ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಮಧ್ಯಾಹ್ನವಾದರೂ ಸಾಲಿನಲ್ಲಿ ನಿಂತು ಚೀಟಿ ಪಡೆಯಲು ಹೊರರೋಗಿಗಳು ಪರದಾಡುತ್ತಿರುವ ದೃಶ್ಯ ಕಂಡು ತಕ್ಷಣ ಹೆಚ್ಚಿನ ಕೌಂಟರ್ ತೆರೆಯಬೇಕು ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚಿಸಿದರು. ಔಷಧ, ಉಗ್ರಾಣ, ವಿತರಣಾ ಕೇಂದ್ರ, ವಾರ್ಡ್ಗಳ ರೋಗಿಗಳಿಗೆ ವಿತರಣೆ ಮಾಡುವ ಸ್ಥಳಗಳಲ್ಲಿ ಅವಧಿ ಮುಗಿದ ಮಾತ್ರೆ, ಗುಲಾಮು ಮತ್ತಿತರ ಔಷಧಗಳನ್ನು ಕಂಡು ತಕ್ಷಣ ಡಿಎಚ್ಒಗೆ ಕರೆ ಮಾಡಿ ಕರೆಸಿ ಎಂದು ಸೂಚನೆ ನೀಡಿದರು. ಡಿಎಚ್ಒ ಅವರು ಡಿಸಿ ಮೀಟಿಂಗ್ನಲ್ಲಿದ್ದಾರೆ ಎಂಬ ಉತ್ತರ ಆ ಕಡೆಯಿಂದ ಬಂದಾಗ ಜಿಲ್ಲೆಯಲ್ಲಿ ಅಧಿಕಾರಿಗಳು ಮೀಟಿಂಗ್ ಅಂತ ಕಾಲ ಕಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಂದ್ರ ರಜೆಯಲ್ಲಿದ್ದ ಕಾರಣ ವೈದ್ಯಾಧಿಕಾರಿಗಳಾದ ಡಾ.ಸತೀಶ್, ಶರತ್ ಚಂದ್ರ, ಟಿಎಚ್ಒ ಡಾ.ಸುಗುಣಾ ಅವರು ಲೋಕಾಯುಕ್ತರಿಗೆ ಮಾಹಿತಿ ನೀಡಿದರು.
ಲಂಚ ಸ್ವೀಕರಿಸುತ್ತಿರೋ ವಿಡಿಯೋ ಲೋಕಾಯುಕ್ತ ತೆಕ್ಕೆಗೆ
ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಭೂ ದಾಖಲೆಗಳ ಕೊಠಡಿ ಬಳಿ ದಾಖಲೆಗಳು ನೀಡಲು ಲಂಚ ಸ್ವೀಕರಿಸುತ್ತಿದ್ದ ಸಿಬ್ಬಂದಿಯ ವಿಡಿಯೋವನ್ನು ಲೋಕೇಶ್ ಎಂಬ ಯುವಕ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಅದೇ ಸಮಯಕ್ಕೆ ಉಪಲೋಕಾಯುಕ್ತರು ದಾಳಿ ಮಾಡಿದಾಗ ಆ ವಿಡಿಯೋ ತುಣುಕನ್ನು ಅಧಿಕಾರಿಗಳು ಶೇರ್ ಮಾಡಿಕೊಂಡು ನ್ಯಾಯಮೂರ್ತಿಗಳ ಗಮನಕ್ಕೆ ತಂದರು, ತಕ್ಷಣ ತಹಸೀಲ್ದಾರ್ ವಿ.ಗೀತಾ ಅವರನ್ನು ಕರೆಸಿದ ಉಪ ಲೋಕಾಯುಕ್ತ ಬಿ.ವೀರಪ್ಪ ಕಠಿಣ ಸೂಚನೆ ನೀಡಿ ತಕ್ಷಣ ಸಂಬಂಧಿಸಿದ ವಿಷಯ ನಿರ್ವಾಹಕನನ್ನು ಅಮಾನತು ಮಾಡಿ, ಡಿಸಿ ಅವರಿಗೆ ಸೂಚನೆ ನೀಡಲಾಗುವುದು. ಪ್ರಕರಣ ದಾಖಲಿಸಿ ಉದ್ಯೋಗದಿಂದಲೇ ಇಂಥವರನ್ನು ವಜಾ ಮಾಡಿ ಎಂದು ಗುಡುಗಿದರು.
ಪವಿತ್ರ ಸೀತೆಯಾಗಿ ಕಾರ್ಯನಿರ್ವಹಿಸಿ
ತಾಲೂಕು ಕಚೇರಿಯಲ್ಲಿ ವಿ.ಗೀತಾ ಅವರಿಗೆ ಸಲಹೆ ನೀಡಿದ ಉಪಲೋಕಾಯುಕ್ತ ವೀರಪ್ಪ ಅವರು, ನೀವು ಇದೇ ತಾಲೂಕಿನ ಅವನಿ ಹೋಬಳಿಯವರು ಎನ್ನುತ್ತೀರಿ, ಪವಿತ್ರ ಪುಣ್ಯಕ್ಷೇತ್ರ ವನವಾಸ ಸೀತೆಯಾಗದೆ, ಆಕೆಯಂತೆ ಪವಿತ್ರ ಸೀತೆಯಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕರ ಸೇವೆ ಸಲ್ಲಿಸಿ, ಕಚೇರಿಯ ಭ್ರಷ್ಟಾಚಾರ ತೊಳೆದು ಹಾಕಿ ಎಂದು ಸೂಚಿಸಿದಾಗ ತಾಲೂಕಿಗೆ ಬಂದು ಮೂರು ತಿಂಗಳಾಗಿದ್ದು, ವ್ಯವಸ್ಥೆ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಆಗ ಲೋಕಾಯುಕ್ತರು ನಿಮಗೆ ಶಕ್ತಿ ಕಮ್ಮಿ ಆದರೆ, ಬೆಂಬಲ ಸಿಗುದಿದ್ದರೆ ತಿಳಿಸಿ, ಜಿಲ್ಲಾಧಿಕಾರಿಗಳ ಮೂಲಕ ಶಕ್ತಿ ತುಂಬಿಸುವ ಕೆಲಸ ಮಾಡೋಣ ಆದ್ರೆ ಭ್ರಷ್ಟ ವ್ಯವಸ್ಥೆ ಸರಿ ಮಾಡಿ ಹೆಸರು ಕೀರ್ತಿಗೊಳಿಸಿ ಎಂದು ಸಲಹೆ ನೀಡಿದರು.
ನಗರಸಭೆಯಲ್ಲೇ ಅನೈರ್ಮಲ್ಯ
ಸ್ವಚ್ಛ ಭಾರತ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ನಗರಸಭೆಯ ಶೌಚಗೃಹ ಗಬ್ಬು ನಾರುತ್ತಿದ್ದದ್ದನ್ನು ಕಂಡ ಬಿ.ವೀರಪ್ಪ ಅವರು. ಇದೇನು ಕಚೇರಿಯೋ ಎಂದು ಪ್ರಶ್ನಿಸಿ ಎಲ್ಲ ವಿಭಾಗಗಳಿಗೂ ತೆರಳಿ ದಾಖಲೆ ಪರಿಶೀಲಿಸಿ, ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಪ್ರೆಸೆಂಟ್ ಹಾಕಿ ಕಚೇರಿಯಲ್ಲಿಲ್ಲದ ಸಿಬ್ಬಂದಿ ಬಗ್ಗೆ ಮಾಹಿತಿ ಕೇಳಿದಾಗ ಆಯ್ತು ಮೂಮೆಂಟ್ ರಿಜಿಸ್ಟರ್ನಲ್ಲಿ ಬರೆದಿದ್ದಾರೆಯೇ ಎಂದು ಪ್ರಶ್ನಿಸಿದಾಗ ಉತ್ತರವೇ ಸಿಗಲಿಲ್ಲ. ಈ ಬಗ್ಗೆ ಸಿಬ್ಬಂದಿಗೆ ಮಾಹಿತಿ ಇಲ್ಲದೆ ಗೊಂದಲಕ್ಕೆ ಒಳಗಾದರು, ಆರೋಗ್ಯ ನಿರೀಕ್ಷೆಗೆ ಪ್ರತಿಭಾ ಅವರ ಮೊಬೈಲ್ ಪರೀಕ್ಷಿಸಿದಾಗ ಹಣ ವಹಿವಾಟು ಆಗಿರುವ ಬಗ್ಗೆ ಪರಿಶೀಲಿಸಿದಾಗ ಮಗುವಿನ ಆರೋಗ್ಯ ಸಮಸ್ಯೆಗೆ ಸಾಲ ಪಡೆದಿರುವ ಮಾಹಿತಿಗೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದಿದ್ದೀರಿ? ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ಸಿಗಲಿಲ್ಲ.
ಸಾರ್ವಜನಿಕ ಆಸ್ಪತ್ರೆ ನರಕದರ್ಶನ
ಡಯಾಲಿಸಿಸ್ ಘಟಕದಲ್ಲಿ ನುರಿತ ವೈದ್ಯರಿಲ್ಲದೆ ಇರುವುದು, ರಕ್ತ ಪರೀಕ್ಷೆ ಹೊಸ ಯಂತ್ರ ಬಳಿಕೆ ಬಗ್ಗೆ ರ್ನಿಲಕ್ಷ$್ಯ ವಹಿಸಿರುವುದು, ಆಸ್ಪತ್ರೆಯಲ್ಲಿ ಸಮರ್ಪಕ ಶುದ್ಧ ನೀರು ಪೂರೈಕೆ ಇಲ್ಲದಿರುವುದು ಆಡಳಿತ ವ್ಯವಸ್ಥೆ, ಹಳ್ಳ ಹಿಡಿದಿರುವುದು ಸೇರಿ ಆಸ್ಪತ್ರೆ ಅವ್ಯವಸ್ಥೆಯ ನರಕದರ್ಶನ ಕಂಡುಬಂದಿತು. ಕರ್ತವ್ಯನಿರತ ವೈದ್ಯ ಡಾ.ಕಿಶನ್ ಸೂರ್ಯ ಬಿಳಿ ಕೋಟ್ ಧರಿಸದೆ ರ್ನಿಲಕ್ಷ$್ಯ ವಸಿರುವ ಬಗ್ಗೆಯೂ ತರಟೆಗೆ ತೆಗೆದುಕೊಂಡರು.