

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಜಿಲ್ಲೆಯ ಬ್ರಹ್ಮಾವರ ಹಾಗೂ ಕಾಪು ತಾಲೂಕಿಬ ವಿವಿಧ ಪ್ರದೇಶಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಸರ್ಕಾರಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಜಿಲ್ಲೆಯ ಸರ್ಕಾರಿ ಇಲಾಖೆಯ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು.
ಪತ್ರಿಕಾ ವರದಿ ನೋಡಿ ಬೆಂಕಿ ಬಿದ್ದ ವಾರಂಬಳ್ಳಿ ಗ್ರಾಪಂನ ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲಿಸಿದ್ದೇನೆ. ಎಲ್ಲ ಅಗಂಡಿಗಳೂ ಸುಟ್ಟು ಹೋಗುವ ಸಾಧ್ಯತೆ ಇತ್ತು. ಸುಟ್ಟ ತ್ಯಾಜ್ಯ ಕೂಡಲೇ ಶುಚಿ ಮಾಡಲು ತಿಳಸಿದ್ದೇನೆ. ಉಡುಪಿ ಎಪಿಎಂಸಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಕುಡಿಯುವ ನೀರು ಮೂರು ತಿಂಗಳಿಂದ ಬಂದಿಲ್ಲ. ಕಾಪು ಡಂಪಿಂಗ್ ಯಾರ್ಡ್ನಲ್ಲೂ ಕಸದ ರಾಶಿಯೇ ಇದ್ದು ಬಿಸಿಲ ಝಳದಿಂದ ಬೆಂಕಿ ಅನಾಹುತ ಆಗಬಹುದು. ಅಥವಾ ಮಳೆ ಬಂದರೆ ವಾಸನೆಯಿಂದಾಗಿ ಸುತ್ತಲಿನ ಜನರಿಗೆ ತೊಂದರೆ ಆಗಬಹುದು. ಮುಖ್ಯಾಧಿಕಾರಿಗೆ ಬರುವಂತೆ ತಿಳಿಸಿದರೂ ಬಂದಿಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. | ನ್ಯಾ. ಬಿ.ವೀರಪ್ಪ. ಉಪಲೋಕಾಯುಕ್ತ