ಅವ್ಯವಸ್ಥೆ ಕಂಡು ಉಪಲೋಕಾಯುಕ್ತ ಗರಂ

ಕೋಲಾರ ಎಸ್​ಎನ್​ಆರ್​ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ವೈದ್ಯರ ಹಾಜರಾತಿ ಪರಿಶೀಲಿಸಿದರು. ಧನಂಜಯ್​ ಇದ್ದರು.
2
ಕೋಲಾರ ಎಸ್​ಎನ್​ಆರ್​ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ವೈದ್ಯರ ಹಾಜರಾತಿ ಪರಿಶೀಲಿಸಿದರು. ಧನಂಜಯ್​ ಇದ್ದರು.
Published on

ವೈದ್ಯರ ಗೈರಿಗೆ ಕೆಂಡಾಮಂಡಲ - ಸಮಸ್ಯೆ ಸರಿಪಡಿಸಿಕೊಳ್ಳದಿದ್ದರೆ ಕ್ರಮದ ಎಚ್ಚರಿಕೆ


  • ಕೋಲಾರ: ನಗರದ ನಚಿಕೇತನ ನಿಲಯ ಹಾಗೂ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅವ್ಯವಸ್ಥೆ ಕಂಡು ಕೆಂಡಾಮಂಡಲಾದರು.
    ನಚಿಕೇತನ ನಿಲಯದಲ್ಲಿ ಮೂಲ ಸೌಲಭ್ಯಗಳ ಕೊರತೆ, ಎಸ್​ಎನ್​ಆರ್​ ಆಸ್ಪತ್ರೆಯಲ್ಲಿ ಸ್ವಚ್ಛತೆ, ವೈದ್ಯರು, ಸಿಬ್ಬಂದಿ ಗೈರು, ಔಷಧ ಕೊರತೆ, ಹೊರಗಡೆಗೆ ಚೀಟಿ ಬರೆದು ಕೊಡುವುದು ಹೀಗೆ ಹಲವು ಸಮಸ್ಯೆ ಬೆಳಕಿಗೆ ಬಂದವು.
    ಆಸ್ಪತ್ರೆಯ ಡಿಎಸ್​ ಕಚೇರಿಗೆ ತೆರಳಿ ಹಾಜರಾತಿ ಪುಸ್ತಕ ಪರಿಶೀಲಿಸಿದರು, ಅದರಲ್ಲಿ 40 ಮಂದಿ ವೈದ್ಯರ ಪೈಕಿ ಕೇವಲ ನಾಲ್ಕೆ$ದು ಮಂದಿ ಹಾಜರಾತಿ ಹಾಕಿದ್ದರು. ಉಳಿದವರು ಗೈರಾಗಿದ್ದು, ಮತ್ತೊಬ್ಬ ವೈದ್ಯ ಮುಂಗಡವಾಗಿ ಸಿಎಲ್​ ಬರೆದಿದ್ದರು. ಇದರಿಂದ ಡಿಎಸ್​, ಡಿಎಚ್​ಒ ಎಲ್ಲಿ ಎಂದು ಪ್ರಶ್ನಿಸಿದಾಗ, ಮ್ಯಾಟ್ರಿನ್​ ವಿಜಯಮ್ಮ ಎಲ್ಲರೂ ಬಂದಿದ್ದರು. ಎಲ್ಲಿಗೋ ಹೋಗಿದ್ದಾರೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
    ಇದಕ್ಕೆ ಗರಂ ಆದ ವೀರಪ್ಪ, ಇದು ಸರ್ಕಾರಿ ಸಂಸ್ಥೆ, ಸಂಬಳಕ್ಕಾಗಿ ಬಂದು ಹೋದರೆ ಸಾಲದು, ಸೇವೆ ಮಾಡಬೇಕು. ಭಾನುವಾರವಾದರೆ ರೋಗಿಗಳು ಬರುವುದಿಲ್ಲವೆ?, ಹೊರ ರೋಗಿಗಳಿಗೆ ಸಮಸ್ಯೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
    ಆನಂತರ ಔಷಧ ದಸ್ತಾನು ಕೊಠಡಿ, ಜನರಿಕ್​, ಪುರಷ, ಮಹಿಳಾ ವಾರ್ಡ್​, ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯ ಮಕ್ಕಳ ವಾರ್ಡ್​, ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿದರು. ಚಿಕಿತ್ಸೆ ಪಡೆದಯುತ್ತಿದ್ದ ರೋಗಿಗಳನ್ನು ಮಾತನಾಡಿಸಿದರು. ಈ ವೇಳೆ ಔಷಧವನ್ನು ಹೊರಗಿನಿಂದ ತರುವಂತೆ ಸೂಚಿಸುತ್ತಾರೆ ಎಂದು ರೋಗಿಗಳು ಗಮನಕ್ಕೆ ತಂದರು. ಚಿಕಿತ್ಸೆಗಾಗಿ ದಾಖಲಾಗಿ ಐದು ದಿನಗಳಾಗಿವೆ. ಆದರೆ ಡಾ.ಮಂಜುನಾಥ್​ ಎಂಬುವರು ಬಲವಂತವಾಗಿ ಹೊರ ಹೋಗಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಬೇತಮಂಗಲ ಚಿನ್ನಪ್ಪ ಎಂಬುವರು ಗಮನಕ್ಕೆ ತಂದರು.
    ಈ ವೇಳೆ ಡಾ.ಮಂಜುನಾಥ್​ ಅವರಿಗೆ ದೂರವಾಣಿ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ತಿಳಿಸಿದರಾದರೂ ಬರಲಿಲ್ಲ. ಇದರಿಂದ ಗರಂ ಆದ ಉಪ ಲೋಕಾಯುಕ್ತರು, ಇಲ್ಲಿ ಡಿಎಸ್​, ಡಿಎಚ್​ಒನು ಬರಲ್ಲ. ಇರುವ ವೈದ್ಯರು ಸರಿಯಾಗಿ ಕೆಲಸ ಮಾಡಿಲ್ಲ. ಇದಕ್ಕೆಲ್ಲ ಹೊಣೆ ಯಾರು ಎಂದು ತರಾಟೆಗೆ ತೆಗೆದುಕೊಂಡರು.
  • ಗರ್ಭಪಾತ ಮಹಾಪಾಪ
    ಮಕ್ಕಳ ತೀವ್ರ ನಿಗಾ ಟಕಕ್ಕೆ ಭೇಟಿ ನೀಡಿದಾಗ ವೈದ್ಯರು ಮೊಬೈಲ್​ನಲ್ಲಿ ಕಾಲಹರಣ ಮಾಡುತ್ತಿದ್ದರು, ಇದನ್ನು ಗಮನಿಸಿದ ವೀರಪ್ಪ ಅವರು, ಮೊಬೈಲ್​ ನೋಡಿಕೊಂಡು ಕುಳಿತರೆ ಏನು ಪ್ರಯೋಜನ, ಹೆರಿಗೆಗಳ ವರದಿ ಕೊಡಿ ಎಂದರು. ಇದಕ್ಕೆ ಉತ್ತರಿಸಿದ ಡಾ.ದೀಪಾ, ಜಿಲ್ಲೆ ಬೇರೆ ಬೇರೆ ತಾಲೂಕು ಸೇರಿ ಹೊರ ಜಿಲ್ಲೆಗಳಿಂದಲೂ ಶಿಾರಸಾಗಿ ಗರ್ಭಿಣಿಯರು ಆಗಮಿಸುತ್ತಾರೆ. ಶೇ.60 ಸಿಜೆರಿಯನ್​ ಹಾಗೂ ಶೇ.40 ಸಹಜ ಹೆರಿಗೆಯಾಗುತ್ತದೆ. ಅಂತೆಯೇ, ಹೊಟ್ಟೆಯಲ್ಲೇ ಮಗುವಿಗೆ ತೊಂದರೆ ಇದ್ದು, ಅನಿವಾರ್ಯವಾದರೆ ಗರ್ಭಪಾತ ಮಾಡಲಾಗುತ್ತಿದೆ ಎಂದು ತಿಳಿಸಿದರು. ಗರ್ಭಪಾತ ಮಾಡುವುದು ತಪು$್ಪ, ನಾನು ನ್ಯಾಯಾಧೀಶನಾಗಿದ್ದಾಗ ಆದೇಶ ಮಾಡಿದ್ದೇನೆ, ಏಕಾಏಕಿಯಾಗಿ ಗರ್ಭಪಾತ ಮಾಡಬಾರದು, ಅದು ಮಹಾಪಾಪ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಉಪಲೋಕಾಯುಕ್ತರು ಸಲಹೆ ನೀಡಿದರು.

*ಸೇವಾ ಮನೋಭಾವ ಇರಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಶ್ರೀನಿವಾಸಪುರ, ಎಸ್​ಎನ್​ಆರ್​ ಆಸ್ಪತ್ರೆಗೆ ಎಂದರೆ ಅದಕ್ಕೊಂದು ಇತಿಹಾಸ ಇತ್ತು, ಆದರೆ ಈಗ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ಡಿಗ್ರಿ ಕಾಲೇಜು ಹಾಸ್ಟೆಲ್​, ನಚಿಕೇತನ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಲಾಗಿದ್ದು, ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ತಯಾರಿಸಿ ವ್ಯವಸ್ಥೆ ಸರಿಪಡಿಸಲು ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ರೋಗಿಯನ್ನು ಬಲವಂತವಾಗಿ ಮನೆಗೆ ಹೋಗು ಎಂದು ಒತ್ತಾಯ ಮಾಡುವ ವೈದ್ಯರಿಗೆ ಸೇವಾಮನೋಭಾವವಿಲ್ಲ. ವೈದ್ಯರಿಗೆ ಮುಖ್ಯವಾಗಿ ತಾಯಿ ಹೃದಯ ಇರಬೇಕು. ಅದು ಬಿಟ್ಟು ವ್ಯವಹಾರ ಮಾಡಲು ಇಲ್ಲಿಗೆ ಬರಬಾರದು, ಧಿಮಾಕು ಇದ್ದರೆ ಮನೆಯಲ್ಲಿ ಇರಬೇಕು ಎಂದು ಹೇಳಿದರು.
ಲೋಕಾಯುಕ್ತ ಎಸ್ಪಿ ಧನಂಜಯ್​, ಡಿವೈಎಸ್ಪಿ ಸೂರ್ಯನಾರಾಯಣ, ಇನ್ಸ್​ಪೆಕ್ಟರ್​ ಆಂಜಿನಪ್ಪ, ರಾಜಗೋಪಾಲ್​, ಡಾ.ಶಿಲ್ಪಾ ಹಾಜರಿದ್ದರು.

  • ವಿದ್ಯಾರ್ಥಿಗಳಿಂದ ದೂರುಗಳ ಸುರಿಮಳೆ
    ನಚಿಕೇತನ ನಿಲಯದಲ್ಲಿ ವಿದ್ಯಾರ್ಥಿಗಳ ವಸತಿ ಕೊಠಡಿ ವೀಸಿದರು, ಅಲ್ಲಿ ಸೊಳ್ಳೆ ಪರದೆ ನೀಡದೆ ಇರುವುದು, ಬೆಳಕಿನ ವ್ಯವಸ್ಥೆ, ಕಾಟ್​ ವ್ಯವಸ್ಥೆ ಇರಲಿಲ್ಲ. ಜತೆಗೆ ಮಕ್ಕಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಮಕ್ಕಳು ಜನರೇಟರ್​ ಕೆಟ್ಟು ಹೋಗಿದೆ, ವಿದ್ಯುತ್​ ಕಡಿತವಾದರೆ ಕತ್ತಲಲ್ಲಿ ಇರಬೇಕು ಎಂದು ಅಳಲು ತೋಡಿಕೊಂಡರು. ಇದಕ್ಕೆ ಗರಂ ಆದ ಉಪ ಲೋಕಾಯುಕ್ತ ವೀರಪ್ಪ ಅವರು ವಾರ್ಡನ್​ ವೆಂಕಟಗಿರಿಯನ್ನು ಏನಿದು ವ್ಯವಸ್ಥೆ ಎಂದು ಪ್ರಶ್ನಿಸಿದರು. ಮೆಕಾನಿಕ್​ಗೆ ಹೇಳಲಾಗಿದ್ದು, ಸರಿಪಡಿಸುವುದಾಗಿ ಸಮಜಾಯಿಷಿ ನೀಡಿದರು. ನಂತರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪಗೆ ದೂರವಾಣಿ ಕರೆ ಮಾಡಿ ಜನರೇಟರ್​ ಕೆಟ್ಟಿದೆ. ಏನು ಮಾಡುತ್ತಿದ್ದೀರಾ?. ನಿಮ್ಮ ಮನೆ ಮಕ್ಕಳಾದರೆ ಹೀಗೆ ಮಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡು ಒಂದು ದಿನದಲ್ಲಿ ಅದು ಸರಿ ಹೋಗಬೇಕು ಎಂದು ತಾಕೀತು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net