ಕಾರ್ಯ ಸಿದ್ಧಿಗೆ ಅಚಲ ನಿರ್ಧಾರ ಮುಖ್ಯ

ಹರಪನಹಳ್ಳಿಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಸ್ವಾಮಿ, ಡಿಪೋ ವ್ಯವಸ್ಥಾಪಕಿ ಎಂ.ಮಂಜುಳಾ, ಪ್ರಮುಖರಾದ ಎಸ್.ಪರಶುರಾಮಪ್ಪ, ಪಿ.ಅಂಜಿನಪ್ಪ, ಜಿ.ಎಸ್ ವೆಂಕಟೇಶ್ ಇತರರಿದ್ದರು.
ಹರಪನಹಳ್ಳಿಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಸ್ವಾಮಿ, ಡಿಪೋ ವ್ಯವಸ್ಥಾಪಕಿ ಎಂ.ಮಂಜುಳಾ, ಪ್ರಮುಖರಾದ ಎಸ್.ಪರಶುರಾಮಪ್ಪ, ಪಿ.ಅಂಜಿನಪ್ಪ, ಜಿ.ಎಸ್ ವೆಂಕಟೇಶ್ ಇತರರಿದ್ದರು.
Published on

ಹರಪನಹಳ್ಳಿ: ಇಂದಿನ ಕಾಲದಲ್ಲಿ ಶಕ್ತಿಗಿಂತ ಜ್ಞಾನ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಕಾರ್ಯ ಸಿದ್ಧಿಸಲು ಅಚಲ ನಿರ್ಧಾರ ಬೇಕು ಎಂದು ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಉಪ್ಪಾರ ನೌಕರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವೃತ್ತಿಯಲ್ಲಿ ಬಡ್ತಿ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಶ್ರಮದಿಂದ ಯಾವುದೇ ಕಾರ್ಯದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪಂಚಾಗ್ನಿ ತಪಸ್ಸು ಸೇರಿ ವಿವಿಧ ತಪಸ್ಸಿನಿಂದ ದೇವಗಂಗೆಯನ್ನು ಭೂಮಿಗೆ ತಂದ ಕೀರ್ತಿ ಭಗೀರಥರಿಗೆ ಸಲ್ಲುತ್ತದೆ. ತಂದೆ-ತಾಯಿಯ ನೆರಳಿನಲ್ಲಿಯೇ ಬದುಕದೆ ಅವರ ಮಾರ್ಗದರ್ಶನದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಜಾತಿ, ಪಂಥಗಳನ್ನು ಮೀರಿದ ಕಾರ್ಯಗಳಿಂದ ಆತ್ಮತೃಪ್ತಿ ಸಿಗುತ್ತದೆ. ಆದರೆ, ಇಂದು ಪ್ರತಿ ಕ್ಷೇತ್ರದಲ್ಲಿ ಜಾತಿಯನ್ನು ಸೇರಿಸುವುದು ಬೇಸರದ ಸಂಗತಿ. ಗಂಡು, ಹೆಣ್ಣು ಎರಡು ಜಾತಿಗಳಿವೆ. ಯುವಕರು ರಾಜಕೀಯದತ್ತ ಒಲವು ತೋರದೆ ಶಿಕ್ಷಣದ ಕಡೆಗೆ ಗಮನ ಹರಿಸಿ ಉತ್ತಮ ಬದುಕು ಕಟ್ಟಿಕೊಳ್ಳಿ. ಮಠ ಮಾನ್ಯಗಳು ನಾಡಿನಲ್ಲಿ ಶಿಕ್ಷಣದ ಕ್ರಾಂತಿ ಮಾಡಿದ್ದು, ಈ ಪೈಕಿ ಸಿದ್ದಗಂಗಾ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.

ಉಪ್ಪಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಎನ್.ಚಂದ್ರಪ್ಪ, ಜಿಲ್ಲಾಧ್ಯಕ್ಷ ಯು.ಸೋಮಪ್ಪ, ತಾಲೂಕಾಧ್ಯಕ್ಷ ಕೆ.ಅಂಜಿನಪ್ಪ, ಪ್ರಮುಖರಾದ ಡಾ.ಉಮೇಶ್ ಬಾಬು, ಎಸ್.ಪರಶುರಾಮಪ್ಪ, ಪಿ.ಗಣೇಶ್, ಡಿ.ಶಶಿಕಲಾ, ಸುಭದ್ರಮ್ಮ, ತಿಮ್ಮಪ್ಪ, ಯು.ಕರಿಬಸಪ್ಪ, ಪೊಲೀಸ್ ಮಹದೇವ, ರಾಮಚಂದ್ರ, ಟಿ.ಮಂಜುನಾಥ, ನಿಂಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net