

ಚಿತ್ರದುರ್ಗ: ರಂಗದಾಸೋಹದಿಂದ ಸಮಾಜದಲ್ಲಿ ಅಡಗಿರುವ ಬಹಳಷ್ಟು ಸತ್ಯಗಳು ಅನಾವರಣಗೊಳ್ಳುವ ಕಾರ್ಯ ಆಗುತ್ತಿದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹೊಳಲ್ಕೆರೆ ಪಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಆವರಣದಲ್ಲಿ 3 ದಿನಗಳ ಕಾಲದ ಆಯೋಜಿಸಿರುವ ಸಾಣೀಹಳ್ಳಿ ಶಿವಸಂಚಾರ -ನಾಟಕ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ನಾಟಕದ ಮೂಲಕ ಮನುಕುಲಕ್ಕೆ ಮಹತ್ವದ ಸಂದೇಶಗಳನ್ನು ಸಾಂಸ್ಕೃತಿ, ಸಂಸ್ಕಾರಯುತವಾಗಿ ಬಿತ್ತುವ ಕೆಲಸವನ್ನು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿರುವುದು ಮಾದರಿ ಕಾರ್ಯ ಎಂದರು.
ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್, ಮಾಜಿ ಅಧ್ಯಕ್ಷ ಈಶ್ವರಪ್ಪ, ಸದಸ್ಯರಾದ ಡಿ.ಎಸ್.ವಿಜಯ್, ಎಚ್.ಆರ್.ನಾಗರತ್ನಾ ವೇದಮೂರ್ತಿ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಕೆ.ಬಿ.ಬಸವರಾಜಯ್ಯ, ಉಪಾಧ್ಯಕ್ಷ ಬಸವರಾಜ್, ಮುಖಂಡ ಎಚ್.ಶಿವಲಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ
ಲೋಕೇಶ್, ತರಳುಬಾಳು ನೌಕರರ ಸಂಘದ ಅಧ್ಯಕ್ಷ ದೇವರಾಜಯ್ಯ, ಶಿಕ್ಷಕರಾದ ಬಸವರಾಜ್, ಜಗದೀಶ್, ಗುತ್ತಿಗೆದಾರ ಪ್ರವೀಣ್ ಕುಮಾರ್, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಇದೇ ವೇಳೆ ಬಿಜ್ಜಳನ ನ್ಯಾಯ ನಾಟಕ ಪ್ರದರ್ಶನಗೊಂಡಿತ್ತು.