

ಗುಳೇದಗುಡ್ಡ: ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಪ್ರತಿಭಾಕಾರಂಜಿ ಒಂದು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಇಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಬೇಕೆಂದು ಶಾಸಕ ಬಿ. ಬಿ. ಚಿಮ್ಮನಕಟ್ಟಿ ಹೇಳಿದರು.
ಸಮೀಪದ ಚಿಕ್ಮಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾದಾಮಿ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ, ಅನಾವರಣಗೊಳಿಸುವ ಮೂಲಕ ಮಕ್ಕಳ ಸವಾಂಗೀಣ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಉಪಾಧ್ಯಕ್ಷ ಬೋರಮ್ಮ ಕಟ್ಟಿ, ಸದಸ್ಯರಾದ ಗಾಯತ್ರಿ ಚಿತ್ತರಗಿ, ಬಸವರಾಜ ಅಂಗಡಿ, ನಾಗಪ್ಪ ಹುಲ್ಲಿಕೇರಿ, ಭರಮಪ್ಪ ಕಾಟನ್ನವರ, ವೈ.ವೈ. ದಳವಾಯಿ, ಗ್ರಾಪಂ ಉಪಾಧ್ಯಕ್ಷೆ ರತ್ನಾ ಹಿರೇತಳವಾರ, ಗ್ರಾಪಂ ಸದಸ್ಯ ಶಿವಾನಂದ ಮುತ್ತಲಗೇರಿ, ಬಿಇಒ ಬಿ.ಎಚ್. ಹಳಗೇರಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನವರ, ಸಂಗಮೇಶ ಉಳ್ಳಾಗಡ್ಡಿ, ಶಂಕರರಾವ ಕುಲಕರ್ಣಿ, ಬಿ.ಟಿ. ಹಳ್ಳಿ, ಬಿ.ಕೆ. ಚಿಮ್ಮಲ್, ಎಂ.ಸಿ. ನಲವತ್ತವಾಡ, ವೈ.ಬಿ. ಚಲವಾದಿ, ಶಿವಾನಂದ ಗೌಡರ, ರವಿ ಕಂಗಳ, ಎಚ್.ಎಂ. ಯತ್ನಟ್ಟಿ, ಯು.ವೈ. ಬಸರಿ, ರಜಾಕ ರಾಜೂರ, ಚಿದಾನಂದ ತಳವಾರ, ಬಸವರಾಜ ಸಿಂದಗಿಮಠ, ಶ್ರೀನಿವಾಸ ಈಳಗೇರಿ, ಬಸವರಾಜ ಚಿಕ್ಕಣ್ಣವರ ಇತರರಿದ್ದರು.