ಪ್ರತಿಭೆ ಕಾರಂಜಿಯಿAದ ಮಕ್ಕಳ ಪ್ರತಿಭೆ ಅನಾವರಣ

11BDVT4
ಭದ್ರಾವತಿಯ ಮೂಲೆಕಟ್ಟೆಯ ಗ್ರೇಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಬೊಮ್ಮನಕಟ್ಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಬಿಇಒ ಎ.ಕೆ.ನಾಗೇಂದ್ರಪ್ಪ ಉದ್ಘಾಟಿಸಿದರು. ಫಾದರ್ ಜಾನ್ ಪೌಲ್, ರವಿಕುಮಾರ್, ಚೆನ್ನಪ್ಪ, ಲಕ್ಷಿ÷್ಮÃ ಶ್ರೀನಿವಾಸ್, ಅಲಿ ನಯಾಜ್ ಇತರರಿದ್ದರು.
Published on

ಭದ್ರಾವತಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು ಉತ್ತಮ ಭವಿಷ್ಯ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಽಕಾರಿ ಎ.ಕೆ. ನಾಗೇಂದ್ರಪ್ಪ ಹೇಳಿದರು.

ನಗರದ ಮೂಲೆಕಟ್ಟೆಯ ಗ್ರೇಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಬೊಮ್ಮನಕಟ್ಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರು ಇಂತಹ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ಮಕ್ಕಳಿಗೆ ಹರಿದುಂಬಿಸಬೇಕು. ಜತೆಗೆ ಶಾಲಾ ಶಿಕ್ಷಕರೂ ಮಕ್ಕಳನ್ನು ಶಿಲ್ಪಿಗಳನ್ನಾಗಿಸಲು ಮುಂದಾಗಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ಫಾದರ್ ಜಾನ್ ಪೌಲ್, ಇಸಿಒ ರವಿಕುಮಾರ್, ಸಿಆರ್‌ಪಿ ಚೆನ್ನಪ್ಪ, ಲಕ್ಷಿ÷್ಮÃ ಶ್ರೀನಿವಾಸ್, ಅಲಿ ನಯಾಜ್, ಶಿಕ್ಷಕರಾದ ತಿಪ್ಪೇಸ್ವಾಮಿ, ಗಿರಿಜಮ್ಮ, ಸುಮತಿ ಕಾರಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net