ಸುಗ್ಗಿ ಸಂಭ್ರಮದಲ್ಲಿ ಹಳ್ಳಿ ಸೊಗಡು ಅನಾವರಣ

Unveiling of village clothes in harvest celebration
Unveiling of village clothes in harvest celebration
Published on

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಜ್ಞಾನಭಾರತಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ‘ಸಾಂಸ್ಕೃತಿಕ ಸುಗ್ಗಿ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಡೀ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಆಹಾರ-ವಿಹಾರ, ಮಾತು, ಊಟ, ಉಡುಗೆ-ತೊಡುಗೆಯಲ್ಲಿ ಗ್ರಾಮೀಣ ಸೊಗಡು ಎದ್ದು ಕಾಣುತ್ತಿತ್ತು.

ಗುಡಿಸಲನ್ನು ನಿರ್ಮಿಸಿ ಸಂಕ್ರಾಂತಿ ಹಬ್ಬದಲ್ಲಿ ಜನರು ಆಹಾರ ಮತ್ತು ವಸ್ತುಗಳನ್ನು ಪ್ರದರ್ಶಿಸಲಾಯಿತು. ಬಾವಿ, ಹೊಲ, ತೋಟ, ಗಿಡಗಳಂತಹ ಹಳ್ಳಿ ಮನೆ ವಾತಾವರಣ, ರೈತಾಪಿ ಜನರು ಬಳಸುವ ಕೃಷಿ, ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿನಿಯರು ಅವುಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಬಾಣಕಾರ ಮಾತನಾಡಿ, ಅಕ್ಷರ ಕಲಿತ ವ್ಯಕ್ತಿ ಮೋಸ ಮಾಡಬಹುದು. ಆದರೆ ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡ ವ್ಯಕ್ತಿ ಎಂದೂ ಮೋಸ ಮಾಡುವದಿಲ್ಲ ಎಂದರು.

ಜವಳಿ ಉದ್ಯಮಿ ಈರಣ್ಣ ಹೊನವಾಡ ಮಾತನಾಡಿ, ಕಬ್ಬು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಯಂತ್ರಗಳ ಬಳಕೆ ಹೆಚ್ಚಾಗಿ ಹಳೆಯ ಕೃಷಿಯೋಪಕರಣಗಳಾದ ಕುರಗಿ, ಕುಂಟೆ, ಕುಡಗೋಲು, ಎತ್ತಿನ ಬಂಡಿ ಬಳಕೆ ಮರೆಮಾಚುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಬದುಕನ್ನು ಬಿಂಬಿಸುವ ಇಂತಹ ಕಾರ್ಯಕ್ರಮ ಆಯೋಜನೆ ಅವಶ್ಯಕ ಎಂದರು.

ನಂದು ಗಾಯಕವಾಡ, ಶಶಿಧರ ಕುಳ್ಳಿ, ಎಂ.ಎಸ್. ತೇಲಿ, ಸನಾತನ ಸಂಸ್ಥೆಯ ಲಕ್ಷ್ಮೀ, ಆರ್. ರಾಜೇಶ್ವರಿ ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net