ವೈವಿಧ್ಯ ಜಾನಪದ ಕಲೆಗಳ ಅನಾವರಣ

DSC_0456
Published on

ಮೈಸೂರು: ಜಂಜೂಸವಾರಿ ಮೆರವಣಿಗೆ ನೂನ್ಯತೆ ಮಧ್ಯೆಯೂ ಜಾನಪದ ಕಲಾತಂಡಗಳು, ಮೆರವಣಿಗೆಯ ಮೆರುಗು ಹೆಚ್ಚಿಸುವಂತೆ ಮಾಡಿತು.
ಪುನಾರ್ವತಿ ಎನ್ನುವ ಭಾವನೆ ಮಧ್ಯೆಯೂ ಕೆಲವೊಂದು ತಂಡಗಳು ನಾಡಿನ ವೈವಿಧ್ಯ ಜಾನಪದ ಕಲೆಗಳನ್ನು ಅನಾವರಣಗೊಳ್ಳುವಂತೆ ಮಾಡಿದವು.
ವಿವಿಧ ನೃತ್ಯ ಮತ್ತು ವಾದನಗಳು ಜನರಿಗೆ ಕರ್ಣಾನಂದ ನೀಡಿದವಲ್ಲದೆ, ಕಣ್ಮನ ಸೆಳೆದವು. ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಕಲಾತಂಡಗಳ ಪ್ರದರ್ಶನ ವಿವಿಧತೆಯಲ್ಲಿ ಏಕತೆ ಸಂದೇಶ ಸಾರಿತು.
ಈ ಬಾರಿ ಕಲಾತಂಡಗಳು, ಸ್ತಬ್ಧಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಅರಮನೆಯಿಂದ ಹೊರಹೋಗಲು ಸತತ ಎರಡೂವರೆ ಗಂಟೆ ತೆಗೆದುಕೊಂಡವು.
ಮೆರವಣಿಗೆ ಆರಂಭವಾಗುತ್ತಿದ್ದಂತೆ ವೀರಗಾಸೆ ತಂಡ ಮುಂದೆ ಸಾಗಿತು. ಇದರ ಹಿಂದೆ ವೀರಭದ್ರ ಕುಣಿತ, ಕೊಂಬು ಕಹಳೆ, ಡೊಳ್ಳು ಕಣಿತದ ತಂಡಗಳು ಸಾಗಿ ನೋಡುಗರನ್ನು ರಂಜಿಸಿದವು. ಲಂಬಾಣಿ ನೃತ್ಯ, ಕೊಡವರ ನೃತ್ಯ, ಕೊಡವರ ಸುಗ್ಗಿಕುಣಿತ, ಕಣಿವಾದನ, ಹಗಲುವೇಷ, ಗೊರವರ ಕುಣಿತ, ವೀರಭದ್ರ ಕುಣಿತ, ವೀರಮಕ್ಕಳ ಕುಣಿತ, ಲಂಬಾಣಿ ನೃತ್ಯ, ನವಿಲು ನೃತ್ಯ, ತಮಟೆ ನಗಾರಿ, ನಾಸಿಕ್ ಡೋಲು, ಕರಡಿ ಮಜಲು, ಬೀಸು ಕಂಸಾಳೆ, ಡೊಳ್ಳು ಕುಣಿತದ ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು.
ಢಕ್ಕೆ ಕುಣಿತ, ಹಾಲಕ್ಕಿ ಸುಗ್ಗಿಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ತಮಟೆ ವಾದನ, ಹುಲಿವೇಷ, ಕುಡುಬಿ ನೃತ್ಯ, ಚೆಂಡೆವಾದನ, ಹಕ್ಕಿಪಿಕ್ಕಿ ನೃತ್ಯ, ಹೂವಿನ ನೃತ್ಯ, ಝಾಂಜ್ ಪಥಕ್, ಮೂಡಲಪಾಯ ಯಕ್ಷಗಾನ ವೇಷ, ದೊಣ್ಣೆವರಸೆ, ಪುರವಂತಿಕೆ, ಪೂಜಾ ಕುಣಿತ, ಕರಗ ನೃತ್ಯ, ಕೋಲಾಟ, ಕೋಳಿ ಕುಣಿತ, ಗೊಂಬೆ ಮೇಳ, ಸತ್ತಿಗೆ ಕುಣಿತ, ಹೆಜ್ಜೆಮೇಳ, ಕರಂಗೋಲು, ಕಂಗೀಲು ನೃತ್ಯ, ಮರಗಾಲು, ಜಗ್ಗಲಗಿ ಮೇಳಕ್ಕೆ ನೋಡುಗರು ಮನಸೋತರು.
ದಟ್ಟಿ ಕುಣಿತ, ಕತ್ತಿ ಗುರಾಣಿ, ಉರುಮೆ, ಅರೆವಾದ್ಯ, ಜೋಗತಿ ನೃತ್ಯ, ಪಟಾ ಕುಣಿತ, ನಂದಿಕೋಲು, ಚಿಟ್ ಮೇಳ, ಸೋಮನಕುಣಿತ, ಗೇರ್ ನೃತ್ಯದ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡದವಲ್ಲದೆ, ನೋಡುಗರ ಕಣ್ಮನ ಸೆಳೆದು ಜಂಬೂಸವಾರಿ ಯಶಸ್ವಿಯಾಗುವಂತೆ ಮಾಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net