ಸರಸ್ಪತಿ ವಿಗ್ರಹ ಅನಾವರಣ

03BTP01
ಗಂಗನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾ ದೇವತೆ ಶ್ರೀ ಸರಸ್ಪತಿ ದೇವಿಯ ವಿಗ್ರಹ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಮೇಶ್, ಮಲ್ಲಿಕಾರ್ಜುನ, ಕೆ.ಸಿ ಸತೀಶ್, ಅಶೋಕ್, ಓಂಕಾರ್ ಮೂರ್ತಿ, ಸುನಿತಾ, ಆಶಾರಾಣಿ ಇದ್ದರು.
Published on

ಬೆಟ್ಟದಪುರ: ಸಮೀಪದ ಗಂಗನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಿದ್ಯಾ ದೇವತೆ ಶ್ರೀ ಸರಸ್ಪತಿ ದೇವಿಯ ವಿಗ್ರಹ ಅನಾವರಣ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕ ಅಡಗೂರು ಅಶೋಕ್ ಮಾತನಾಡಿ, ಶಾಲೆಯಿಂದ ನಿವೃತ್ತಿಯಾಗಿ ಬೀಳ್ಕೊಡುತ್ತಿರುವ ಮುಖ್ಯಶಿಕ್ಷಕ ಪಿ.ಎಲ್ ರಮೇಶ್ ಅವರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಉತ್ತಮ ವಾತಾವರಣ ನಿರ್ಮಿಸುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಥಳೀಯ ಜನರು, ಪಾಲಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರೊಂದಿಗೆ ಸೇರಿ ಸಹಕಾರ ಪಡೆದು ಶಾಲಾವರಣದಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿದ್ದಾರೆ. ಇದು ವಿದ್ಯಾರ್ಥಿಗಳ ಉತ್ತಮ ವಾತಾವರಣ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದರು.

ನಿವೃತ್ತರಾದ ಮುಖ್ಯಶಿಕ್ಷಕ ರಮೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ, ಹಾರನಹಳ್ಳಿ ಕೆಪಿಎಸ್ ಪ್ರಾಥಮಿಕ ವಿಭಾಗದ ಶಾಲೆ ಮುಖ್ಯಶಿಕ್ಷಕ ಕೆ.ಸಿ ಸತೀಶ್, ಶಿಕ್ಷಕರಾದ ಅಡಗೂರು ಅಶೋಕ್, ಓಂಕಾರ್ ಮೂರ್ತಿ, ಸುನೀತಾ, ಆಶಾರಾಣಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net