

ಔರಾದ್: ವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಗತಸಿಂಗ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರಾಗಿದ್ದು, ಇವರ ಹೋರಾಟದ ಕಿಚ್ಚು ಇಂದಿನ ಯುವಕರಿಗೆ ಆದರ್ಶವಾಗಿರಬೇಕು ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಹೇಳಿದರು.
ಕೌಠಾ (ಬಿ) ಗ್ರಾಮದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣ ಹಾಗೂ ಭಗತಸಿಂಗ್‌ರ ಮೂರ್ತಿ ಅನಾವರಣ ಹಾಗೂ ನಿವೃತ್ತ ಯೋಧರ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಗಳವಾಡುವ ಬದಲು ಜನಗಳಿಗೆ ಸತ್ಯ ವಿಚಾರಗಳ ಬಗ್ಗೆ ಜಾಗೃತಗೊಳಿಸುವುದು ಬಹುಮುಖ್ಯವಾಗಿದೆ. ಮಹಾತ್ಮರು, ಸಂತರು, ದಾರ್ಶನಿಕರು ಸತ್ಯದ ಪ್ರತಿಪಾದನೆ ಮಾಡಿದ್ದು, ಆ ಸತ್ಯವನ್ನು ನಾವು ಅರಿತು ಜೀವನ ನಡೆಸಿ ಸುಂದರ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಮುಖಂಡ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಜಾತಿ, ಮತ, ಧರ್ಮಕ್ಕಿಂತ ದೇಶ ಮುಖ್ಯ ಎಂಬ ವಿಚಾರಗಳು ಮಕ್ಕಳಲ್ಲಿ ತಾಯಂದಿರು ಬಿತ್ತಬೇಕು. ಇಂದು ನಡೆದ ಉಭಯ ಮೂರ್ತಿ ಪ್ರತಿಷ್ಠಾಪನೆಯೇ ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿದೆ ಎಂದರು.
ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಅಮೃತ ಮಹಾರಾಜರು, ಬೀರಲಿಂಗೇಶ್ವರ ಪಟ್ಟದ ಪೂಜಾರಿ ಗೋಪಾಲ ಮುತ್ಯಾ, ಕಾಂಗ್ರೆಸ್ ಮುಖಂಡ ಡಾ.ಭೀಮಸೇನ್‌ರಾವ ಸಿಂಧೆ, ಅಮೃತರಾವ ಚಿಮಕೋಡೆ, ಪೀರಪ್ಪ ಔರಾದೆ, ಮನ್ಪ್ರೀತ್ ಸಿಂಗ್ ಮೌಂಟಿ, ಸಂಜೀವಕುಮಾರ ಅತಿವಾಳೆ, ವೀರಶೆಟ್ಟಿ ದೀನೆ, ಶ್ರಾವಣಕುಮಾರ ಭಂಡೆ, ಪ್ರದೀಪ ಬೇಂದ್ರೆ, ಲೋಕೇಶ ಮರ್ಜಾಪುರ, ಶಿವಕುಮಾರ ಬೆಲ್ದಾಳ, ಮಲ್ಲಿಕಾರ್ಜುನ ಕಾಳಗೊಂಡ, ಆನಂದ ಮಂದಕನಳ್ಳಿ, ರವಿ ದೇವರೆ, ಸಂದೀಪ ಮೇತ್ರೆ, ಗಣಪತಿ ಮೇತ್ರೆ, ಮಾದಪ್ಪ ಕೋಟೆ ಇತರರಿದ್ದರು.
ನಿವೃತ್ತ ಯೋಧರಾದ ದೇವೆಂದ್ರ ದೊಡ್ಮನಿ, ಶಿವಶರಣಪ್ಪ ಬಿರಾದಾರ, ಮಲ್ಲಿಕಾರ್ಜುನ ಬೆಲ್ದೆ, ಶ್ರೀಮಂತ ಕಾರಾಮುಂಗೆ, ಸಲ್ಲಾವುದ್ದೀನ್ ಮುಲ್ಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.