ಹಬ್ಬಗಳಿಂದ ಸಂಸತಿ ಅನಾವರಣ

Unveiling of Parliament with festivities
ವಿಜಯಪುರ ಆದರ್ಶನಗರದ ಎಕ್ಸಲಂಟ್​ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಕ್ರಾತಿ ಹಬ್ಬದ ಅಂಗವಾಗಿ ಮಕ್ಕಳು ಪರಸ್ಪರ ಎಳ್ಳು ಬೆಲ್ಲ ನೀಡಿ ಹಬ್ಬದ ಶುಭಾಶಯ ಹೇಳಿದರು.
Published on

ವಿಜಯಪುರ: ಹಬ್ಬಗಳು ಎಂದರೆ ಕೇವಲ ಮನರಂಜನೆಯ ಕ್ಷಣಗಳಲ್ಲ. ಅವು ಸಾಮರಸ್ಯದ ತಾಣಗಳು. ಹಬ್ಬದ ದಿನದಲ್ಲಿ ಎಲ್ಲರೂ ಒಂದೆಡೆ ಸೇರುವ ಮೂಲಕ ವ್ಯಕ್ತಿಗತ ಅಸಮಾನತೆ ದೂರವಾಗಿ ಭ್ರಾತೃತ್ವ ಮೂಡುತ್ತದೆ ಎಂದು ಮುಖ್ಯ ಗುರು ಎಂ.ಐ. ಬಿರಾದಾರ ಹೇಳಿದರು.

ಇಲ್ಲಿನ ಆದರ್ಶನಗರ ಬಡಾವಣೆಯ ಎಕ್ಸಲಂಟ್​ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಸಂಕ್ರಾತಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಬ್ಬಗಳಿಂದ ನಮ್ಮ ಸಂಸತಿ ಅನಾವರಣವಾಗಲಿದೆ ಎಂದರು.

ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿ, ಇಂದಿನ ಮಕ್ಕಳಿಗೆ ಹಿಂದಿನ ಕಾಲದ ಆಹಾರ ಪದ್ಧತಿ, ಊಟ ಉಪಚಾರಗಳ ಅರಿವಿಲ್ಲ.

ಇಂತಹ ಹಬ್ಬಗಳನ್ನು ಶಾಲೆಯಲ್ಲಿ ಆಚರಿಸುವುದರಿಂದ ಅವರಿಗೆ ಹಿರಿಯರು ಪಾಲಿಸುತ್ತಿದ್ದ ಜೀವನ ಪಾಠ ಮತ್ತು ಆರೋಗ್ಯಯುತ ಆಹಾರಗಳ ಸೇವನೆಯ ಮಹತ್ವ ತಿಳಿಸಿದಂತಾಗುತ್ತದೆ ಎಂದು ಹೇಳಿದರು. ಶಿಕ್ಷಕಿಯರಾದ ಲಕ್ಷಿ$್ಮ ಬಿರಾದಾರ, ರಾಧಾ ಪಾಟೀಲ ಹಬ್ಬಗಳ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net