ಕನಕದಾಸರ ಮೂರ್ತಿ ಅನಾವರಣ

Unveiling of Kanakadasa's idol
ತಾಂಬಾ ಸಮೀಪದ ಬನ್ನಹಟ್ಟಿ ಗ್ರಾಮದಲ್ಲಿ ಶಾಸಕ ಅಶೋಕ ಮನಗೂಳಿ ಕನಕದಾಸರ ಮೂರ್ತಿ ಅನಾವರಣ ಮಾಡಿದರು. ಅಪ್ಪಣ್ಣ ಕಲ್ಲೂರ ಇದ್ದರು.
Published on

ತಾಂಬಾ: ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾಗಿದ್ದು, ಕೊಟ್ಟಮಾತಿನಂತೆ ನಡೆದುಕೊಳ್ಳುವ ಮುಗ್ದ ಜನರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಮೀಪದ ಬನ್ನಹಟ್ಟಿ ಗ್ರಾಮದಲ್ಲಿ ಭಾನುವಾರ ಕನಕದಾಸರ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಸಾಧನೆಗೆ ನಿರಂತರ ಪ್ರಯತ್ನ ಅವಶ್ಯ. ಅಂದುಕೊಂಡದ್ದು ಸಾಧಿಸಲು ಪಣತೊಟ್ಟು ನಿಲ್ಲಬೇಕು. ಹಾಲುಮತ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ಮಾನವಿಯ ಮೌಲ್ಯಗಳನ್ನು ತಿಳಿಸಿದಾಗ ಮಾತ್ರ ಇನ್ನುಳಿದ ಮಕ್ಕಳಂತೆ ಮುಂದೆ ಬರಲು ಸಾಧ್ಯವಾಗುತ್ತದೆ. ನನ್ನ ರಾಜಕಾರಣದಲ್ಲಿ ಹಾಲುಮತ ಸಮಾಜ ಕೈಹಿಡಿದು ಎತ್ತಿದ್ದು, ಮುಂದೆಯೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ. ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ ಭಗವಂತನ ಪ್ರೀತಿಗೆ ನಾವು ಪಾತ್ರರಾಗೋಣ ಎಂದರು.

ಜಿಲ್ಲಾ ಕೆಡಿಪಿ ಸದಸ್ಯ ಕಾಂತನಗೌಡ ಪಾಟೀಲ ಮಾತನಾಡಿ, ಎಲ್ಲರ ಅಂತರಂಗದಲ್ಲೂ ಪರಮಾತ್ಮನಿದ್ದಾನೆ. ದೇವರು ಹೊರಗಡೆ ಇಲ್ಲ, ಎಲ್ಲರ ಒಳಗೆ ಇರುವ ದೇವರನ್ನು ಜಪಿಸಿದರೆ ಬದುಕು ಸಾರ್ಥಕವಾಗುತ್ತದೆ. ನಾವೂ ಬದುಕಿ ಇತರರನ್ನು ಬದುಕಿಸುವುದೇ ನಿಜವಾದ ಜೀವನ. ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು ಕಂಡ ಕನಸು ನನಸಾಗಬೇಕಾದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಗೊರನಾಳ ಹಿರೇಮಠದ ವಿರುಪಾಕ್ಷಿ ಶ್ರೀಗಳು, ರಜಾಕಸಾಬ ಚಿಕ್ಕಗಸಿ, ರವಿ ನಡುಗಡ್ಡಿ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಪರಸು ಬಿಸನಾಳ, ಮಹ್ಮದ ಧಡೆದ, ಬಸವರಾಜ ಅವಟಿ, ಶಾಂತಪ್ಪ ಹಚನಾಳ, ರಾಯಗೊಂಡ ನಾಟಿಕಾರ, ಬಸವರಾಜ ಪೂಜಾರಿ, ಸಂಜೀವ ಮಂಗಳೂರ, ದುಂಡಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಅಮೋಘಸಿದ್ದ ಪೂಜಾರಿ, ಬಸವರಾಜ ವಾಲಿಕಾರ, ಕಾಂತಪ್ಪ ಹರಿಜನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net