

ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯದ ವತಿಯಿಂದ ಎಂಡ್ ಪೋಲಿಯೋ ಹುಂಡಿಯನ್ನು ಸುಬ್ರಹ್ಮಣ್ಯದ ಅನುಗ್ರಹ ವಸತಿ ಗೃಹದಲ್ಲಿ ಅನಾವರಣಗೊಳಿಸಲಾಯಿತು. ಕ್ಲಬ್ ನಿಕಟ ಪೂರ್ವಾಧ್ಯಕ್ಷ ಚಂದ್ರಶೇಖರ ನಾಯರ್ ಹುಂಡಿಗೆ ದೇಣಿಗೆ ನೀಡುವ ಮೂಲಕ ಸಹಕಾರ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್. ಮತ್ತು ನಿರ್ದೇಶಕ ಗಿರೀಶ್ ದೇಣಿಗೆಯನ್ನು ಹುಂಡಿಯಲ್ಲಿ ಹಾಕಿದರು. ವಿಶ್ವಾದ್ಯಂತ ಪೋಲಿಯೋ ನಿರ್ಮೂಲನೆಯಲ್ಲಿ ಮಹತ್ತರವಾದ ಪಾತ್ರವನ್ನು ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ನಡೆಸಿದೆ. ಪೋಲಿಯೋ ನಿರ್ಮೂಲನೆಗೆ ಪೋಲಿಯೋ ಬಿಂದು ನೀಡುವ ಮಹತ್ತರವಾದ ಕಾರ್ಯದಲ್ಲಿ ರೋಟರಿಯೊಂದಿಗೆ ಸಾರ್ವಜನಿಕರೂ ಸಹಭಾಗಿತ್ವ ಹೊಂದಲು ಎಂಡ್ ಪೋಲಿಯೋ ಹುಂಡಿ ಯೋಜನೆಯನ್ನು ರೋಟರಿ ಸಂಸ್ಥೆ ಜಾರಿಗೆ ತಂದಿದೆ ಎಂದು ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್. ತಿಳಿಸಿದರು. ರೋಟರಿ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.