

ಮಂಗಳೂರು: ಪರಪಾದೆಯ ದ.ಕ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಅವರು ಶೈಕ್ಷಣಿಕ ಗೋಡೆ ಬರಹ ಅನಾವರಣಗೊಳಿಸಿದರು. ಮುತ್ತೂಟ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ವಿಭಾಗ ಮತ್ತು ಪೃಥ್ವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಗಾಯತ್ರಿ ರಾವ್, ರಂಜನಿ, ಮುತ್ತೂಟ್ ಸಂಸ್ಥೆಯ ರೀಜನಲ್ ಆಪರೇಷನ್
ಮ್ಯಾನೇಜರ್ ಮೋನಿಷಾ ಎಂ.ಕೆ., ರಾಗ ತರಂಗದ ಅಧ್ಯಕ್ಷೆ ಆಶಾ ಹೆಗ್ಡೆ, ಪೃಥ್ವಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಲೋಲಾಕ್ಷಿ ಫರ್ನಾಂಡಿಸ್, ಮುತ್ತೂಟ್ ಫೈನಾನ್ಸ್‌ನ ಅಧಿಕಾರಿಗಳಾದ ಸುನಿಲ ವಿ ಕೆ, ಪ್ರಸಾದ್ ಕುಮಾರ್, ಲತೀಶ್ ಕುಮಾರ್, ನೋಯೆಲ್ ಕುಮಾರ್, ಪ್ರಜ್ವಲ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷೆ ಮೈಮುನಾ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕಿ ರೇಖಾ ಸ್ವಾಗತಿಸಿದರು. ಸುಮತಿ ಬಾಯಿ ಎ ಸಿ ಕಾರ್ಯಕ್ರಮ ನಿರೂಪಿಸಿದರು.