ಆ.15ರಂದು ಬುದ್ಧ ಪ್ರತಿಮೆ ಅನಾವರಣ: ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾಹಿತಿ

Unveiling of Buddha statue in Neralakere Mandya
Published on

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದಲ್ಲಿ ಆ.15ರಂದು ಆರು ಅಡಿ ಎತ್ತರದ ಭಗವಾನ್ ಗೌತಮ ಬುದ್ಧರ ಪ್ರತಿಮೆ ಅನಾವರಣ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.
ಬುದ್ಧ ಭಾರತ ಫೌಂಡೇಷನ್‌ನಿಂದ ಭಗವಾನ್ ಗೌತಮ ಬುದ್ಧರ ಪ್ರತಿಮೆಯನ್ನು ನೇರಲಕೆರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಅಂದು ಬೆಳಗ್ಗೆ 11.30ಕ್ಕೆ ಬುದ್ಧನ ಪ್ರತಿಮೆಯನ್ನು ಬೆಳ್ಳರಥ ಮಾದರಿಯ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ನೇರಲಕೆರೆ ಗ್ರಾಮಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೆರವಣಿಗೆಯಲ್ಲಿ ಡೊಳ್ಳುಕುಣಿತ, ತಮಟೆ, ನಗಾರಿ ವಾದ್ಯಗಳ ಕಲಾವಿದರು ಕಲಾ ಪ್ರದರ್ಶನ ನೀಡುವರು. ಒಂದು ಸಾವಿರ ಯುವಕರು ಬೈಕ್ ಜಾಥಾದಲ್ಲಿ ಮಂಡ್ಯದಿಂದ ನೇರಲಕೆರೆ ಗ್ರಾಮಕ್ಕೆ ತೆರಳುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಗೌತಮ ಬುದ್ಧರ ರಥಕ್ಕೆ ಚಾಲನೆ ನೀಡುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು ಎಂದರು.
ಕೊಳ್ಳೇಗಾಲದ ಚೇತವನ ಬುದ್ಧ ವಿಹಾರದ ಮನೋರಖ್ಖಿತ ಭಂತೇಜಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧದತ್ತ ಥೇರಾ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಿವೃತ್ತ ಎಡಿಜಿಪಿ ಡಾ.ಸುಭಾಷ್ ಭರಣಿ, ವಿಚಾರವಾದಿಗಳಾದ ಪ್ರೊ.ಕೆ.ಎಸ್.ಭಗವಾನ್, ಮಹೇಶ್‌ಚಂದ್ರಗುರು, ಪ್ರೊ.ತುಕಾರಾಂ, ಮೂಡ್ನಾಕೋಡು ಚಿನ್ನಸ್ವಾಮಿ, ಡಾ.ಸುರೇಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದು ವಿವರಿಸಿದರು.
ಫೌಂಡೇಷನ್‌ನ ಅಧ್ಯಕ್ಷ ಜೆ.ರಾಮಯ್ಯ, ಬೆಂಗಳೂರು ಸ್ಪೂರ್ತಿಧಾಮದ ಬೌದ್ಧಗುರು ದಮ್ಮವೀರ ಭಂತೇಜಿ, ವೈ.ಥಾಮಸ್ ಬೆಂಜಮಿನ್, ಲಾರೆನ್ಸ್, ಎಸ್.ಮೋಹನ್‌ಕುಮಾರ್, ಜವರಪ್ಪ, ಸಿ.ಬಿ.ವೇಣುಗೋಪಾಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net