ಬೈಸಿಕಲ್ ಕ್ಲಬ್‌ನ ಜೆರ್ಸಿ ಅನಾವರಣ

h29-bycicle club
Published on

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ವತಿಯಿಂದ ಲಾಂಗೆಸ್ಟ್ ಸಿಂಗಲ್ ಲೈನ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ 5ನೇ ವರ್ಷವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಗ್ಗೆ ತೋಳನಕೆರೆಯಿಂದ ದೇವರಗುಡಿಹಾಳದ ನಿಧಿವನ ಫಾರ್ಮ್ ಹೌಸ್‌ವರೆಗೆ ಸುಮಾರು ಸಾವಿರಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು 12 ಕಿ.ಮೀ. ರೈಡ್ ಮಾಡಿದರು. ಇದೇ ವೇಳೆ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಅವರು 2024ನೇ ಸಾಲಿನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net