

ವಿಜಯಪುರ : ಮಕ್ಕಳು ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಹೇಳಿದರು.
ನಗರದ ಯುಬಿಎಚ್ಪಿಎಸ್ ನಂ. 25 ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಯುಬಿಎಚ್ಪಿಎಸ್ ನಂ. 16 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂ ಜಿಲ್ಲಾ ಟಕದ ಖಜಾಂಚಿ ಜುಬೇರ ಕೆರೂರ ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆ ತೋರಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತವೆ ಎಂದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಜಹಾಂಗೀರ ಮಮದಾಪೂರ ಮಾತನಾಡಿದರು. ಶಾಲೆ ಮುಖ್ಯ ಗುರುಗಳು, ಸಹಶಿಕ್ಷಕರು, ಸಂದ ಪದಾಧಿಕಾರಿಗಳು, ಮಕ್ಕಳು ಮತ್ತಿತರರಿದ್ದರು.
ಸಿಆರ್ಪಿ ಎ.ಡಿ. ನಾಗಠಾಣ ಸ್ವಾಗತಿಸಿದರು. ಸಿಆರ್ಪಿ ಜಾವೀದ ಕರಜಗಿ ನಿರೂಪಿಸಿದರು. ಕೊನೆಗೆ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.