

ಮುಧೋಳ:ಬ್ರಿಟಿಷರು ವಿರುದ್ಧ ಅಪ್ರತಿಮ ಹೋರಾಟ ಮಾಡಿ ಪ್ರಾಣ ತ್ಯಾಗ ಸ್ವಾತಂತ್ರ ಹೋರಾಟಗಾರರಾದ ಹಲಗಲಿ ಬೇಡರ ಪುತ್ಥಳಿ ಅನಾವರಣ ಗೊಳಿಸಬೇಕು ಎನ್ನುವ ಆಶಯ ಈಡೇರುವ ಲಕ್ಷಣ ಕಾಣುತ್ತಿಲ್ಲ. ಜಾಗ ನಿಗದಿ ಪಡಿಸಿ ಪುತ್ಥಳಿ ಸ್ಥಾಪನೆ ವರ್ಷಗಳೆದರು ಜಗತ್ತಿಗೆ ಮಾತ್ರ ಇವು ಯಾರ ಮೂರ್ತಿಗಳ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ..!!
ರನ್ನ ನಗರಿ ಮುಧೋಳದ ಉತ್ತೂರ ಗೇಟ್ ಒಳ ಆವರಣದಲ್ಲಿ ಹಲಗಲಿ ಬೇಡರ ಬಂಡಾಯ ನೆನಪಿಸುವ ನಿಟ್ಟಿನಲ್ಲಿ ಹೋರಾಟಗಾರರಾದ ಜಡಗಣ್ಣ&ಬಾಲಣ್ಣ ಅವರ ಪ್ರತಿಮೆ ಸಿದ್ದಗೊಂಡು ವರ್ಷಗಳೇ ಗತಿಸಿವೆ. ಆಗಸ್ಟ್, ಸೆಪ್ಟಂಬರ್ ಬಂದರೇ ಸಾಕು ಬಂಡಾಯ ಇತಿಹಾಸ ನೆನಪಿಗೆ ಬರುತ್ತದೆ. ಆದರೇ ಶಾಶ್ವತವಾಗಿ ಅವರ ನೆನಪು ಮೂರ್ತ ಸ್ವರೂಪದಲ್ಲಿ ಉಳಿಸುವ ಕೆಲಸ ನೆನೆಗುದಿಗೆ ಬಿದ್ದಿದೆ.
ಧೂಳಿನ ಮಜ್ಜನ
ಹುಟ್ಟು ವೀರರಾಗಿದ್ದ ಹಲಗಲಿ ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಮಾಡಿದ ತಂತ್ರ, ಕುತಂತ್ರಗಳು ವಿಲ ಆಗುತ್ತಲೇ ಬಂದಿದ್ದವು. ಆದರು ಬಹುದೊಡ್ಡ ಕಾಳಗದಲ್ಲಿ ಇಬ್ಬರು ಪ್ರಾಣ ತ್ಯಾಗ ಮಾಡಿದರು. ಇಂತಹ ಮಹಾನ್ ಹೋರಾಟಗಾರರು ಪುತ್ಥಳಿ ನಗರಕ್ಕೆ ಆಗಮಿಸಿ ಬಹು ದಿನಗಳಾಯಿತು. ನಗರದ ಹೃದಯ ಭಾಗವಾಗಿರುವ ಜಡಗಣ್ಣ&ಬಾಲಣ್ಣ ವೃತ್ತದಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ ಒಂಬತ್ತು ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಅಂದು ಪೂಜೆ ಸಲ್ಲಿಸಿ ಪ್ಲಾಸ್ಟಿಕ್ ಹೊದಿಕೆ ಹಾಕಿದ ಅಧಿಕಾರಿಗಳು ಇದುವರೆಗೂ ತಿರುಗಿ ನೋಡಿಲ್ಲ. ಧೂಳಿನ ಮಜ್ಜನವೇ ಪುತ್ಥಳಿಗೆ ಪೂಜೆ ಎನ್ನುವಂತಾಗಿದೆ.
ಚುನಾವಣೆಯಲ್ಲಿ ಭಾಷಣ ಬೀಗಿದು ಮತ ಪಡೆದು ಮಂತ್ರಿಯಾದರು ಕ್ಷೇತ್ರದ ಶಾಸಕ, ಸಚಿವ ಆರ್.ಬಿ.ತಿಮ್ಮಾಪುರ ಈ ಬಗ್ಗೆ ರ್ನಿಲಕ್ಷ ಧೋರಣೆ ವಹಿಸಿದ್ದಾರೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಧೋಳ ನಗರಕ್ಕೆ ಬಂದಾಗಲೊಮ್ಮೆ ಇದೇ ವೃತ್ತದಲ್ಲಿ ಓಡಾಡಿದರು ಪ್ರತಿಮೆ ಅನಾವರಣಕ್ಕೆ ಮಾತ್ರ ಮುಂದಾಗುತ್ತಿಲ್ಲ. ಹಲಗಲಿ ಬೇಡರ ಬಗ್ಗೆ ತಾತ್ಸಾರ ಧೋರಣೆ ತಾಳಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಅಜಾನುಭಾಹು ಕಂಚಿನ ಪ್ರತಿಮೆಗಳು: ರಣ ಕಹಳೆ ಮೊಳಗಿಸಿದ್ದ ಹಲಗಲಿ ಬೇಡರ ನಾಯಕರೆನಿಸಿಕೊಂಡಿದ್ದ ಜಡಗಣ್ಣ&ಬಾಲಣ್ಣ ಮೂರ್ತಿ ಅಜಾನುಬಾಹುವಿನಂತೆ ನಿರ್ಮಾಣವಾಗಿದೆ. ಅಂದಾಜು 18ಲ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ಕಂಚಿನ ಪ್ರತಿಮೆಗಳು 9 ಅಡಿ ಎತ್ತರ ಹೊಂದಿವೆ. ಜಡಗಣ್ಣ&ಬಾಲಣ್ಣ ಪ್ರತಿಮೆಗಳಿರುವ ವೃತ್ತ ವಿಜಯಪುರ&ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ರಾಜ್ಯ, ಹೊರ ರಾಜ್ಯದಿಂದ ಇದೇ ರಸ್ತೆ ಮೂಲಕ ಹಾದು ಹೋಗುವ ಪ್ರಯಾಣಿಕರು ಇವು ಯಾರ ಪ್ರತಿಮೆಗಳು ಎನ್ನುವ ಬಗ್ಗೆ ಜಿಜ್ಞಾಸೆಯಿಂದ ಪ್ರಶ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
ರಾಜಕೀಯ ಪ್ರತಿಷ್ಠೆ, ತಿಕ್ಕಾಟವೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಪ್ರತಿಭೆ ಅನಾವರಣ ವಿಷಯದಲ್ಲಿಯೂ ಮತ ಬ್ಯಾಂಕ್ ರಾಜಕಾರಣ ಅಡಗಿದೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿವೆ. ಒಟ್ಟಾರೆ ಸ್ವಾರ್ಥ ಹಿತಾಸಕ್ತಿ ಬಿಟ್ಟು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಮಡಿದ ಜೀವಗಳಿಗೆ ಅಗೌರವ ತೋರುವ ನಡೆ ಬೇಸರ ಉಂಟು ಮಾಡಿದೆ.
ಈ ಭಾಗದಲ್ಲಿ ಶಕ್ತಿಗೆ ಹೆಸರಾದ ಜಡಗಣ್ಣ ಬಾಲಣ್ಣ ಅವರ ಮೂರ್ತಿಗಳು ಪ್ರತಿಷ್ಠಾಪನೆಗೊಂಡು ಒಂದು ವರ್ಷ ಕಳೆದಿದೆ. ಸರ್ಕಾರದ ವಿಳಂಬ ನೀತಿ ಅರಿವಿಲ್ಲ, ಶ್ರೀವೇ ಮೂರ್ತಿ ಅನಾವರಣಕ್ಕೆ ದಿನಾಂಕ ನಿಗದಿಯಾಗಲಿ.ಭೀಮಸಿ ತಳವಾರ ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯ ಮುಧೋಳ
ಮುಧೋಳದಲ್ಲಿ ಅನಾವರಣಗೊಳ್ಳದ ಜಡಗಣ್ಣ ಬಾಲಣ್ಣ ಮೂರ್ತಿಗಳು.