ಒಳಮೀಸಲಾತಿ ಆಧಾರದ ಮೇಲೆ ಟಿಕೆಟ್ ಕೊಡಿ

8LNG01
Published on

ಲಿಂಗಸುಗೂರು: ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿ 15 ವರ್ಷವಾದರೂ ಅಸ್ಪಶ್ಯರಿಗೆ ಆದ್ಯತೆ ನೀಡುತ್ತಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಒಳಮೀಸಲಾತಿ ಆಧಾರದ ಮೇಲೆ ಅಸ್ಪಶ್ಯರಿಗೆ ಟಿಕೆಟ್ ನೀಡಬೇಕೆಂದು ಮೂಲ ಅಸ್ಪಶ್ಯ ಸಮುದಾಯ ಒಕ್ಕೂಟದ ತಾಲೂಕು ಸಂಚಾಲಕ ಹನುಮಂತಪ್ಪ ಕುಣಿಕಲ್ಲೂರು ಒತ್ತಾಯಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಕಳೆದ ಮೂರು ದಶಕಗಳಿಂದ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಅಸ್ಪಶ್ಯರನ್ನು ಮತ ಬ್ಯಾಂಕ್ ಮಾಡಿಕೊಂಡು, ಒಳಮೀಸಲಾತಿ ಜಾರಿ ಮಾಡದೆ ರಾಜಕೀಯ ಅವಕಾಶ ನೀಡದೆ ವಂಚಿಸುತ್ತಿದೆ. ಬಿಜೆಪಿ ಒಳ ಮೀಸಲಾತಿ ಜಾರಿಗಾಗಿ ಶಿಫಾರಸು ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.

ಜಿಲ್ಲೆಯಲ್ಲಿ ಅಸ್ಪಶ್ಯರು ರಾಜಕೀಯ ಸ್ಥಾನಮಾನದಿಂದ ವಂಚಿತರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನೇಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಒಳ ಮೀಸಲಾತಿ ಅನುಸಾರ ಟಿಕೆಟ್ ನೀಡಬೇಕು ಎಂದು ಹನುಮಂತಪ್ಪ ಆಗ್ರಹಿಸಿದರು. ಪ್ರಮುಖರಾದ ತಿಪ್ಪಣ್ಣ ಕರಡಕಲ್, ದುರಗಪ್ಪ ಅಗ್ರಹಾರ, ಮೋಹನ ಗೋಸ್ಲೆ, ಗಣಪತಿ ಮೋಚಿ, ಚಂದ್ರಕಾಂತ ಹೊನ್ನಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net