13ರ ವರೆಗೆ ಯಲ್ಲಮ್ಮದೇವಿ ದರ್ಶನಕ್ಕಿಲ್ಲ ಅವಕಾಶ

010203
Published on

ಕೊಕಟನೂರ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಜು. 6ರಿಂದ ಜು. 13ರ ವರೆಗೆ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಅರ್ಚಕ ಶಾಮರಾವ ಪೂಜಾರಿ ತಿಳಿಸಿದರು.

ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಿವೆ. ಅದರಲ್ಲಿ ಪಕ್ಕದ ಝುಂಜರವಾಡ ಗ್ರಾಮದಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಯಲ್ಲಮ್ಮನವಾಡಿ ಹಾಗೂ ಸುಟ್ಟಟ್ಟಿ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಸಹಕರಿಸುತ್ತಿದ್ದಾರೆ. ದೇವಸ್ಥಾನಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಹಲವಾರು ಭಕ್ತರು ಬರುತ್ತಿದ್ದಾರೆ. ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ದೇವಿ ದರ್ಶನ ನಿರ್ಬಂಧಿಸಲಾಗಿದೆ. ಅಲ್ಲದೆ, ದೇವಾಲಯದ ಪ್ರಾಂಗಣದ ಅಂಗಡಿ ಮುಂಗಟ್ಟು ಸಹ ಬಂದ್ ಮಾಡಲಾಗುವು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅರ್ಜುನ ಪೂಜಾರಿ, ರಮೇಶ ದೇಶಪಾಂಡೆ, ಶಿವಾಜಿ ಚವ್ಹಾಣ, ಮಹಾಂತೇಶ ಐಹೊಳೆ, ಪರಶುರಾಮ ಮಾದರ, ಮಲ್ಲಿಕಾರ್ಜುನ ಮಂಟೂರ, ಅಣ್ಣಪ್ಪ ಕೋಳಿ, ಸುರೇಶ ಘಾಟಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net