ಏ.20ರ ತನಕ ಕಾಲುವೆಗೆ ನೀರು ಹರಿಸಿ

Mask mle Prathap
ಪ್ರತಾಪಗೌಡ ಪಾಟೀಲ್
Published on

ಮಸ್ಕಿ: ಈ ಭಾಗದ ರೈತರಿಗೆ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದೆ. ಕಾಡಾ ಸಮಿತಿ ಮಾ.20ರ ತನಕ ಕಾಲುವೆಗೆ ನೀರು ಬಿಡುವುದಾಗಿ ಆದೇಶಿಸಿದ್ದು ಖಂಡನೀಯ. ರೈತರ ಹಿತದೃಷ್ಟಿಯಿಂದ ಏ.20ರವರೆಗೆ ನೀರು ಹರಿಸಬೇಕೆಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಭಾಗದ ರೈತರು ಜನವರಿ ಅಂತ್ಯದವರೆಗೆ ಭತ್ತ ನಾಟಿ ಮಾಡಿದ್ಧಾರೆ. ಅದರ ಪೂರ್ಣ ಬೆಳೆ ಬರಬೇಕಾದರೆ ಏ.20 ರವರೆಗೆ ನೀರಬೇಕು. ಭದ್ರ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಟಿಬಿ ಡ್ಯಾಂಗೆ ಹೆಚ್ಚುವರಿ 6-7 ಟಿಎಂಸಿ ನೀರನ್ನು ಬಿಡಬೇಕು.

ಈ ಮೂಲಕ ಸರ್ಕಾರ ರೈತರಿಗೆ 2ನೇ ಬೆಳೆಗೆ ಅನುಕೂಲ ಮಾಡಿಕೊಡಬೇಕು. ಸ್ಪಂದಿಸದಿದ್ದರೆ ರೈತರೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net