ಏ.20ರ ತನಕ ನೀರು ಹರಿಸಿ

3LNG01
ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶಿವಪುತ್ರಗೌಡ, ತಾಲೂಕು ಅಧ್ಯಕ್ಷ ವೈ.ದುರ್ಗಾಪ್ರಸಾದ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ವೀರನಗೌಡ, ಮೂರ್ತಿ ಗಲಗ, ರಾಯಪ್ಪ ಇತರರಿದ್ದರು.
Published on

ಲಿಂಗಸುಗೂರು: ಬಸವಸಾಗರ ಜಲಾಶಯದ ಬಲದಂಡೆ ಮತ್ತು ರಾಂಪುರ ಏತನೀರಾವರಿ ಯೋಜನೆ ಕಾಲುವೆಗಳಿಗೆ ಏ.20ರ ತನಕ ನೀರು ಹರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ಮುಖಂಡರು ಸೋಮವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.

ಬಲದಂಡೆ ಮತ್ತು ರಾಂಪುರ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಮಾಡಿದ್ದು, ಬೆಳೆ ಸಂಪೂರ್ಣವಾಗಿ ಕೈಗೆಟುಕಲು ವಾರಬಂದಿಯಂತೆ ಎರಡೂ ನಾಲೆಗಳಿಗೆ ನೀರು ಹರಿಸಬೇಕಿದೆ. ಸ್ಥಗಿತಗೊಳಿಸಿದರೆ ಬೆಳೆಗಳು ಹಾನಿಗೀಡಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಲಿದೆ.

ಹೀಗಾಗಿ ನಾಲೆಗಳಿಗೆ ಏ.1 ರಿಂದ 10 ಮತ್ತು ಏ.15 ರಿಂದ 20 ರವರೆಗೆ ವಾರಬಂದಿ ಮೂಲಕ ನೀರು ಹರಿಸಬೇಕು. ಮಾ.7ರೊಳಗೆ ಲಿಖಿತ ರೂಪದಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ಮಾ.8 ರಿಂದ ಗುರುಗುಂಟಾ ಗ್ರಾಮದಲ್ಲಿ ಅಹೋರಾತ್ರಿ ಧರಣಿ ಮತ್ತು ಮಾ.9 ರಂದು ಮೇಣದ ಬತ್ತಿ ಮೆರವಣಿಗೆ ಮತ್ತು ಮಾ.10 ರಂದು ಎಸಿ ಕಚೇರಿವರೆಗೆ ಟ್ರಾಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನೆ ಮತ್ತು ಮಾ.11 ರಂದು ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ತಡೆ ನಡೆಸಲಾಗುವುದೆಂದು ಎಚ್ಚರಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ, ತಾಲೂಕು ಅಧ್ಯಕ್ಷ ವೈ.ದುರ್ಗಾಪ್ರಸಾದ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ವೀರನಗೌಡ, ಮೂರ್ತಿ ಗಲಗ, ರಾಯಪ್ಪ, ಲಕ್ಷ್ಮೀನಾರಾಯಣ, ಶಿವಣ್ಣ, ಬಸಣ್ಣ, ಆದಪ್ಪ, ಬಸವರಾಜ, ಹನುಮಂತ, ಬಾಷಾಸಾಬ್, ವೆಂಕಟೇಶ, ಮೌನೇಶ, ಮಲ್ಲೇಶ, ನಾಗಪ್ಪ, ಬಡೇಸಾಬ್, ಇಮಾಮ್‌ಹುಸೇನ್, ಸೂಫಿಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net