ರೈಲ್ವೆ ಅಂಡರ್​ ಪಾಸ್​ ಬಳಿ ಅವೈಜ್ಞಾನಿಕ ಕಾಮಗಾರಿ

Untitled-2
ದೊಡ್ಡಬಳ್ಳಾಪುರದ ರೈಲ್ವೆ ಕೆಳ ಸೇತುವೆ ಬಳಿಯ ಅವ್ಯವಸ್ಥೆಯನ್ನು ಅಧಿಕಾರಿಗಳ ಜತೆ ಶಾಸಕ ಧೀರಜ್​ ಮುನಿರಾಜು ವೀಸಿದರು. ನಗರಸಭೆ ಅಧ್ಯೆ ಸುಮಿತ್ರಾ ಆನಂದ್​, ಪೌರಾಯುಕ್ತ ಕಾರ್ತಿಕ್​ ಈಶ್ವರ್​, ಕೆಆರ್​.ಡಿಸಿಎಲ್​ ಟೋಲ್​ ವ್ಯವಸ್ಥಾಪಕ ರವಿಬಾಬು, ಡಿಪಿಎ ಮಾಜಿ ಸದಸ್ಯ ಆನಂದಮೂರ್ತಿ ಹಾಗೂ ಇತರರಿದ್ದರು.
Published on

ದೊಡ್ಡಬಳ್ಳಾಪುರ : ನಗರದ ರೈಲ್ವೆ ನಿಲ್ದಾಣ ಸಮೀಪ ರೈಲ್ವೆ ಅಂಡರ್​ ಪಾಸ್​ ಬಳಿ ಅವೈಜ್ಞಾನಿಕ ರಸ್ತೆ ನಿರ್ಮಾಣವಾಗಿದ್ದು, ಮಳೆ ಬಂದರೆ ಅಂಡರ್​ ಪಾಸ್​ ಕೆರೆಯಂತಾಗಿ ಸವಾರರು ಪರದಾಡುತ್ತಿದ್ದ ಹಿನ್ನೆಲೆ ಶಾಸಕ ಧೀರಜ್​ ಮುನಿರಾಜ್​ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳು ವಿರುದ್ಧ ಗರಂ ಆದರು.

ಬಳಿಕ ಮಾತನಾಡಿದ ಶಾಸಕ ಧೀರಜ್​ ಮುನಿರಾಜು, ಈ ಭಾಗದಲ್ಲಿ ರೈಲ್ವೆ ಅಂಡರ್​ ಪಾಸ್​, ಹಿಂದೂಪುರ&ಯಲಹಂಕ ಹೆದ್ದಾರಿ, ನಗರಸಭೆ ಒಳಚರಂಡಿ ಕಾಮಗಾರಿ ಸೇರಿ ಎಲ್ಲ ಕಾಮಗಾರಿಗಳು ಅವೈಜ್ಞಾನಿಕ. ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿದೆ. ಬೇಜವಾಬ್ದಾರಿ ಹಾಗೂ ರ್ನಿಲಕ್ಷ$್ಯ ಕೆಲಸಗಳಿಂದ ಸಾವು&ನೋವು ಉಂಟಾದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ. ನಿಮ್ಮ ಮೇಲೆ ಎ್​ಐಆರ್​ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ರೈಲ್ವೆ ಮತ್ತು ಕೆಆರ್​ಡಿಸಿಎಲ್​ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಧಿವೇಶನ ಬಳಿಕ ಬೃಹತ್​ ಹೋರಾಟ: ಹಿಂದೂಪುರ&ಯಲಹಂಕ ರಾಜ್ಯ ಹೆದ್ದಾರಿ ದೊಡ್ಡಬಳ್ಳಾಪುರ ಮೂಲಕ ಹಾದು ಹೋಗುತ್ತದೆ. ಇದು ಟೋಲ್​ ರಸ್ತೆಯಾಗಿರುವುದರಿಂದ ಟೋಲ್​ ವಸೂಲಾತಿ ದಿನೇದಿನೆ ಹೆಚ್ಚಾಗುತ್ತಿದೆ. ಟೋಲ್​ ವಸೂಲಿ ಮಾಡುತ್ತಿರುವವರು ರಸ್ತೆ ಅಭಿವೃದ್ಧಿ, ದುರಸ್ತಿ, ಜಂಕ್ಷನ್​ಗಳಲ್ಲಿ ಹೈ&ಮಾಸ್ಟ್​ ಬಲ್ಬ್​, ಬಸ್​ ನಿಲ್ದಾಣಗಳು, ಸೂಚನಾ ಫಲಕಗಳು ಸೇರಿ ಇನ್ನಿತರ ಸುಗಮ ಸಂಚಾರಕ್ಕೆ ಸೌಲಭ್ಯ ಒದಗಿಸಬೇಕು. ಆದರೆ, ಇದಾವುದನ್ನೂ ಮಾಡದೇ ಕೇಲವ ಹಣ ವಸೂಲಿ ಮಾಡಿಕೊಂಡು ತೆಪ್ಪಗಿದ್ದರೆ ಹೇಗೆ?. ಟೋಲ್​ ವಸೂಲಿ ಮಾಡುವವರಿಗೆ 10 ವಾರ ಗಡುವು ನೀಡುತ್ತೇನೆ. ಸೂಕ್ತ ರೀತಿಯಲ್ಲಿ ಕೆಲಸ ಮಾಡದಿದ್ದರೆ, ಜುಲೈ ಅಧಿವೇಶನ ನಂತರ ನನ್ನ ಮೇಲೆ ಕೇಸ್​ ದಾಖಲಾದರೂ ಚಿಂತೆ ಇಲ್ಲ, ಟೋಲ್​ ವಸೂಲಿ ನಿಲ್ಲಿಸುತ್ತೇನೆ ಎಂದು ಧೀರಜ್​ ಮುನಿರಾಜ್​ ಎಚ್ಚರಿಸಿದರು.

ಅಧಿಕಾರಿಗಳ ಬೇಜವಾಬ್ದಾರಿಗೆ ಉತ್ತರ ಕೊಡಬೇಕು : ರೈಲ್ವೆ ನಿಲ್ದಾಣ ಜಂಕ್ಷನ್​ ಬಳಿ ಪಿಡಬ್ಲೂ$್ಯಡಿ ರಸ್ತೆ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ರಸ್ತೆ, ರೈಲ್ವೆ ರಸ್ತೆ, ನಗರಸಭೆ ರಸ್ತೆ ಹಾದು ಹೋಗುತ್ತವೆ. ಈ ನಾಲ್ಕು ರಸ್ತೆಗಳಿಂದ ಬರುವ ನೀರು ರೈಲ್ವೆ ಅಂಡರ್​ ಪಾಸ್​ ಬಳಿ ನಿಲ್ಲುತ್ತವೆ. ಇವರಿಗೆ ಅನುಕೂಲಕ್ಕೆ ತಕ್ಕಂತೆ ರಸ್ತೆ ಮಾಡಿಕೊಂಡಿದ್ದಾರೆ. ಈ ರಸ್ತೆಗಳಿಂದ ವಾಹನ ಸವಾರರು ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ. ಇದರಿಂದ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದಕ್ಕೆ ಶಾಸಕನಾದ ನನಗೆ ಸಾರ್ವಜನಿಕರು ಪ್ರಶ್ನೆ ಕೇಳುತ್ತಿದ್ದಾರೆ. ನಾನು ಯಾರಿಗೆ ಉತ್ತರ ಕೊಡಬೇಕು ? ಧೀರಜ್​ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ರಸ್ತೆ, ಚರಂಡಿ, ಕಸದ ಸಮಸ್ಯೆ ಸೇರಿ ಇನ್ನಿತರ ಸಮಸ್ಯೆಗಳು ತಾಂಡವಾಡುತ್ತಿವೆ. ಸಂಬಂಧಪಟ್ಟ ಇಲಾಖಾಧಿಕಾರಿಗಳ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ತ್ವರಿತವಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.

ನಿಲ್ದಾಣ ಮೇಲ್ದರ್ಜೆಗೆ : ರೈಲ್ವೆ ಅಂಡರ್​ ಪಾಸ್​ ಅವೈಜ್ಞಾನಿಕವಾಗಿದೆ. 2017ರಲ್ಲಿ ಪ್ರಾರಂಭವಾಗಿ 2025ರಲ್ಲಿ ಮುಕ್ತಾಯವಾಗಿದೆ. ಆದರೆ, ಕಾಮಗಾರಿ ಪರಿಪೂರ್ಣತೆ ಕಂಡಿಲ್ಲ, ಪಾದಚಾರಿಗಳು ಓಡಾಡಲು ಜಾಗವಿಲ್ಲ, ಓವರ್​ ಬ್ರಿಡ್ಜ್​ ನಿರ್ಮಾಣಕ್ಕೆ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಬಳಿ ಮಾತನಾಡಿದ್ದೇನೆ. ಎಳ್ಳುಪುರ, ವೀರಾಪುರ ಬಳಿ ರೈಲ್ವೆ ಬ್ರಿಡ್ಜ್​ ನಿರ್ಮಾಣಕ್ಕೂ ಕೇಳಿದ್ದೇವೆ. 22 ಕೋಟಿ ರೂ. ವೆಚ್ಚದಲ್ಲಿ ಗತಿಶಕ್ತಿ ಯೋಜನೆಯಡಿ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾಗೋರ್ ರ್ಟಮಿನಲ್​ ನಿರ್ಮಾಣವೂ ಆಗುತ್ತಿದೆ. ಗೌರಿಬಿದನೂರು ಕಂಟೋನೆಂಟ್​ ರೈಲ್ವೆ ನಿಲ್ದಾಣಕ್ಕೆ ಹೊಸ ರೈಲು ಬೇಕು ಎಂದು ರೈಲ್ವೆ ಸಚಿವ ವಿ.ಸೋಮಣ್ಣ ಅವರ ಬಳಿ ಮನವಿ ಮಾಡಲಾಗಿದೆ ಎಂದು ಧೀರಜ್​ ಮುನಿರಾಜ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net