ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ಅವೈಜ್ಞಾನಿಕವಾಗಿ ದರ ನಿಗದಿ: ಶಾಸಕ ಕೆ. ಹರೀಶ್‌ಗೌಡ

k-harishgowda
Published on

ನಗರದಲ್ಲಿ ಈಗಾಗಲೇ ಕಾಮಗಾರಿ ಹಂತದಲ್ಲಿರುವ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ಅವೈಜ್ಞಾನಿಕವಾಗಿ ದರ ನಿಗದಿ ಮಾಡಿರುವುದರಿಂದ ರಸ್ತೆ ದುರಸ್ತಿಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟದ ಕುರಿತು ಸದನದಲ್ಲಿ ಶಾಸಕ ಕೆ. ಹರೀಶ್‌ಗೌಡ ಮಾತನಾಡಿದರು.

ಮುಂದಿನ ದಿನಗಳಲ್ಲಿ ವಿದ್ಯುತ್ ಕೇಬಲ್ ಅನ್ನು ಸಂಪೂರ್ಣವಾಗಿ ಅಂಡರ್ ಗ್ರೌಂಡ್ ಮಾಡಲು ಉದ್ದೇಶಿಸಿದ್ದು, ಆ ಸಂದರ್ಭದಲ್ಲಿ ರಸ್ತೆ ಅಗೆಯುವುದರಿಂದ ಅದರ ದುರಸ್ತಿಯನ್ನು ಸಂಬಂಧಪಟ್ಟ ಇಲಾಖೆಯೇ ನಿರ್ವಹಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net