ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ

oplus_136314880
oplus_136314880
Published on

ತೆಲಸಂಗ: ಇಲ್ಲಿನ ಜೇವರಗಿ&ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಡಿ ಗ್ರಾಮಕ್ಕೆ ತೆರಳಲು ನಿರ್ಮಿಸಿರುವ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಸ್ಥಳಿಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾಮಗಾರಿ ಸರಿಪಡಿಸದೆ ತರಾತುರಿಯಲ್ಲಿ ಟೋಲ್​ ವಸೂಲಿ ಪ್ರಾರಂಭಿಸಿದರೆ ರಸ್ತೆ ಬಂದ್​ ಮಾಡಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ಗ್ರಾಮಸಭೆ ಕರೆದು ಜನತೆಯ ಮುಂದಿಟ್ಟು ಟೋಲ್​ ಪ್ರಾರಂಭಿಸಬೇಕು. ಇದು ಅಥಣಿ ಹಾಗೂ ವಿಜಯಪುರಕ್ಕೆ ತೆರಳುವ ಮಾರ್ಗವಾಗಿದೆ. ಗ್ರಾಮದಲ್ಲಿ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ತಣಕ್ಕೆ ರಸ್ತೆ ಕಾಮಗಾರಿ ಸರಿಪಡಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ತೆಲಸಂಗ: ಇಲ್ಲಿನ ಜೇವರಗಿ&ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಡಿ ಗ್ರಾಮಕ್ಕೆ ತೆರಳಲು ನಿರ್ಮಿಸಿರುವ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಸ್ಥಳಿಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾಮಗಾರಿ ಸರಿಪಡಿಸದೆ ತರಾತುರಿಯಲ್ಲಿ ಟೋಲ್​ ವಸೂಲಿ ಪ್ರಾರಂಭಿಸಿದರೆ ರಸ್ತೆ ಬಂದ್​ ಮಾಡಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ. ಗ್ರಾಮಸಭೆ ಕರೆದು ಜನತೆಯ ಮುಂದಿಟ್ಟು ಟೋಲ್​ ಪ್ರಾರಂಭಿಸಬೇಕು. ಇದು ಅಥಣಿ ಹಾಗೂ ವಿಜಯಪುರಕ್ಕೆ ತೆರಳುವ ಮಾರ್ಗವಾಗಿದೆ. ಗ್ರಾಮದಲ್ಲಿ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ತಣಕ್ಕೆ ರಸ್ತೆ ಕಾಮಗಾರಿ ಸರಿಪಡಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ

ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net