

ವಿಜಯಪುರ:ಅವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ವಿಳಂಬವಿಲ್ಲದೆ ತಕ್ಷಣ ಜಾರಿ ಮಾಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂದ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ಸಂ ಜಿಲ್ಲಾಧ್ಯಕ್ಷ ಅಯ್ಯನಗೌಡ ಬಾಗೇವಾಡಿ ಮಾತನಾಡಿ, ರಾಜ್ಯ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ ದುಡಿಯುವ ನೌಕರರಿಗೆ ಕನಿಷ್ಠ ವೇತನ ಅವೈಜ್ಞಾನಿಕವಾಗಿ ಜಾರಿ ಮಾಡಿದೆ.
ಈ ಕುರಿತು ಸಂವು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದು, ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದು ಕನಿಷ್ಠ ವೇತನ ನಿಗದಿ ಮಾಡಲು 10 ವಾರಗಳ ಗಡುವು ನೀಡಿತ್ತು. ಸದ್ಯ ಆದೇಶವಾಗಿ ಮೂರು ವರ್ಷ ಕಳೆದಿದೆ ಎಂದು ದೂರಿದರು.
ಸಂವು ಕರ ವಸೂಲಿಗಾರು, ಗುಮಾಸ್ತ, ಕ್ಲಕ್, ಡಾಟಾ ಎಂಟ್ರಿ ಆಪರೇಟರ್ ಈ ಹುದ್ದೆಗಳನ್ನು ಅತಿ ಕುಶಲರಾಗಿ ಪರಿಗಣಿಸುವ ಮೂಲಕ ಮೂಲ ವೇತನವನ್ನು 38,021 ರೂ. ಗಳನ್ನು ನಿಗದಿ ಪಡಿಸಬೇಕು. ನೀರುಗಂಟಿ, ಪಂಪ್ ಆಪರೇಟರ್- ಕಂ ಮೆಕ್ಯಾನಿಕ್ ಹುದ್ದೆದವರಿಗೆ ಮೂಲ ವೇತನ 33.062 ರೂ. ಗಳನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಸಂದ ಶಿವಾನಂದ ಬಿರಾದಾರ, ಅಬ್ದುಲ್ಸ ರಜಾಕ್ ತಮದಡ್ಡಿ, ಗಂಗಾಧರ ಪಾಟೀಲ, ಸೋಮನಿಂಗ ಕಾಗರ, ಸಂತೋಷ ಹಿರೇಮಠ, ಜಮೀರ್ ನದಾಫ, ಎಸ್.ಡಿ. ಹಳ್ಳಿ, ಹೂವಣ್ಣ ಪೂಜಾರಿ, ಬಸವರಾಜ ಜೊಲ್ಲೆ, ಭೀಮ ಲಮಾಣಿ, ಲಕ್ಷ$್ಮಣ ಪಾಟೀಲ, ಮಲ್ಲಿಕಾರ್ಜುನ ಮಾದರ, ಮಲ್ಲಪ್ಪ ಚೆಳ್ಳಗಿ, ಚಾಂದಸಾಬ, ನಾರಾಯಣ ಬಡಿಗೇರ, ಅಬ್ಬಾಸ್ ಅಲಿ, ಕಲ್ಲಪ್ಪ, ಸುವರ್ಣ, ಸುನಂದಾ ಮತ್ತಿತರರಿದ್ದರು.
ಕನಿಷ್ಠ ಕೂಲಿ ಆದೇಶವನ್ನು ಜಾರಿ ಮಾಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂದ ಪದಾಧಿಕಾರಿಗಳು ವಿಜಯಪುರದಲ್ಲಿ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಯ್ಯನಗೌಡ ಬಾಗೇವಾಡಿ, ಶಿವಾನಂದ ಬಿರಾದಾರ, ಗಂಗಾಧರ ಪಾಟೀಲ ಮತ್ತಿತರರಿದ್ದಾರೆ.