ಪರಿಹಾರಗೊಳ್ಳದ ಸಿ ವಿಭಾಗದ ದೂರುಗಳು

New Phone in New
Published on

ಹುಬ್ಬಳ್ಳಿ : ಅವಳಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ನಿಲುಗಡೆ ಜಾಗದ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ಮಹಾನಗರ ಪಾಲಿಕೆ, ವಾಣಿಜ್ಯ ಮಳಿಗೆಗಳಲ್ಲಿ ವಾಹನಗಳವಾಹನ ನಿಲುಗಡೆ ಜಾಗ ಮೀಸಲಿಟ್ಟಿರುವ ಬಗ್ಗೆ ಶೀಘ್ರ ಪರಿಶೀಲನೆ ನಡೆಸಲು ತೀರ್ವನಿಸಿದೆ.

ಇಲ್ಲಿನ ಪಾಲಿಕೆ ಮುಖ್ಯ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಮೇಯರ್ ಫೋನ್ ಇನ್ ಕಾರ್ಯಕ್ರಮದಲ್ಲಿ ವಾಹನ ನಿಲುಗಡೆ ಜಾಗದ ಸಮಸ್ಯೆ ಕುರಿತು ಚರ್ಚೆ ನಡೆಯಿತು.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ನಿಲುಗಡೆ ಜಾಗದ ಸಮಸ್ಯೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾಪೌರರಾದ ಜ್ಯೋತಿ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಸ್ಪಂಧಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಅವಳಿ ನಗರದ ದೊಡ್ಡ ಮಾಲ್, ಕಲ್ಯಾಣ ಮಂಟಪಗಳಲ್ಲಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ರ್ಪಾಂಗ್​ಗೆ ಜಾಗ ಮೀಸಲಿಡುವ ಬಗ್ಗೆ ಪರಿಶೀಲಿಸಲಾಗುವುದು. ವಾಹನ ನಿಲುಗಡೆ ಜಾಗ ಮೀಸಲಿಡದವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ವಾಹನ ನಿಲುಗಡೆ ಜಾಗದ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ಹೀಗಾಗಿ, ವಾಹನ ನಿಲುಗಡೆ ಜಾಗದ ಶುಲ್ಕ ಆಕರಣೆ ಬಗ್ಗೆಯೂ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಸಾರ್ವಜನಿಕರೊಂದಿಗೆ ಸರಿಯಾಗಿ ವ್ಯವಹರಿಸುವಂತೆ ರ್ವಾಹನ ನಿಲುಗಡೆ ಜಾಗದ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಪೌರರಾದ ಜ್ಯೋತಿ ಪಾಟೀಲ, ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿ ಬರುವ ಸಿ ವಿಭಾಗದ ದೂರುಗಳು ನಿವಾರಣೆಯಾಗದೇ ಉಳಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿ ವಿಭಾಗದ ದೂರುಗಳಾದ ರಸ್ತೆ, ಚರಂಡಿ, ಬೀದಿ ದೀಫಗಳ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ನಿರ್ದೇಶನ ನೀಡಿದರು.

ಸಿ ವಿಭಾಗದ ದೂರುಗಳನ್ನು ಪರಿಹರಿಸಲು ವಲಯ ಸಹಾಯಕ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ಸೂಚಿಸಿದರು.

ಕಳೆದ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಎ ವಿಭಾಗದ 27 ದೂರುಗಳು ಕೇಳಿ ಬಂದಿದ್ದವು. ಈ ಬಾರಿ 22 ದೂರುಗಳು ಬಂದಿವೆ. ಆದರೆ, ಸಿ ವಿಭಾಗದಲ್ಲಿನ ದೂರುಗಳು ಹೆಚ್ಚುತ್ತಿವೆ ಎಂದು ಮಾಹಿತಿ ನೀಡಿದರು.

ಅನುದಾನದ ಕೊರತೆ ಇದ್ದರೂ ಈಗಾಗಲೇ ಪಾಲಿಕೆ ಸದಸ್ಯರಿಗೆ 1.2 ಕೋಟಿ ರೂ. ಅನುದಾನ ನೀಡಲಾಗಿದೆ. ಇಷ್ಟಾಗಿಯೂ ದೂರುಗಳು ಕೇಳಿ ಬಂದಿವೆ. ಇಂದಿನ ಕಾರ್ಯಕ್ರಮದಲ್ಲಿ ಒಟ್ಟು 20 ಕರೆಗಳನ್ನು ಮಾಡಿರುವ ಸಾರ್ವಜನಿಕರು, 40 ದೂರುಗಳನ್ನು ನೀಡಿದ್ದಾರೆ. ಅದರಲ್ಲಿ ಎ ವಿಭಾಗದ 22, ಬಿ ವಿಭಾಗದ ಒಂದು ಹಾಗೂ ಸಿ ವಿಭಾಗದಲ್ಲಿ 17 ದೂರುಗಳು ಬಂದಿವೆ. ಕಳೆದ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಎ ವಿಭಾಗದಲ್ಲಿ 27 ದೂರುಗಳು ದಾಖಲಾಗಿದ್ದು, ಎಲ್ಲ ದೂರುಗಳನ್ನು ಪರಿಹರಿಸಲಾಗಿದೆ. ಬಿ ವಿಭಾಗದ 5 ದೂರುಗಳು ದಾಖಲಾಗಿದ್ದು, ಎರಡು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸಿ ವಿಭಾಗದ 13 ದೂರುಗಳಲ್ಲಿ 4 ದೂರುಗಳನ್ನು ಮಾತ್ರ ಬಗೆಹರಿಸಲಾಗಿದೆ ಎಂದು ವಿವರಿಸಿದರು.

ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 152 ಕೋಟಿ ರೂ. ಕಾಮಗಾರಿ ಆದೇಶ ನೀಡಲಾಗುತ್ತಿದೆ ಎಂದು ಮಹಾಪೌರರಾದ ಜ್ಯೋತಿ ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.

ಗಣೇಶ ಚತುರ್ಥಿ ಅಂಗವಾಗಿ ನಗರದ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಧೂಳಿನ ಸಮಸ್ಯೆ ಎದುರಾಗಿದೆ. ಹೀಗಾಗಿ, ದಿನಕ್ಕೆ ನಾಲ್ಕು ಬಾರಿ ರಸ್ತೆ ನೀರು ಸಿಂಪಡಿಸಲಾಗುತ್ತಿದೆ ಎಂದು ಹೇಳಿದರು.

ತಿಂಗಳೊಳಗೆ ಬೀದಿ ದೀಪ ಅಳವಡಿಕೆ : ಅವಳಿ ನಗರದಲ್ಲಿ ಒಟ್ಟು 77 ಸಾವಿರ ಎಲ್​ಇಡಿ ಬೀದಿ ದೀಪಗಳನ್ನು ಇನ್ನೂ ಒಂದು ತಿಂಗಳೊಳಗಾಗಿ ಅಳವಡಿಸಲಾಗುವುದು ಎಂದು ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ಈಗಾಗಲೇ ಅವಳಿ ನಗರದಲ್ಲಿ 18 ಸಾವಿರ ಎಲ್​ಇಡಿ ಬೀದಿ ದೀಪ ಅಳವಡಿಸಲಾಗಿದೆ. 48 ಸಾವಿರ ಸಾಮಾನ್ಯ ಬೀದಿ ದೀಪಗಳನ್ನು ಎಲ್​ಇಡಿ ದೀಪಗಳನ್ನಾಗಿ ಪರಿವರ್ತಿಸಾಗುವುದು. 11 ಸಾವಿರ ಖಾಲಿ ಕಂಬಗಳು ಉಳಿದಿದ್ದು, ಅವುಗಳಿಗೂ ಎಲ್​ಇಡಿ ದೀಪಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net