75 ವರ್ಷಗಳಿಂದ ಬೆಂಬಿಡದ ಬರ

download (1)
Published on

ಜಗಳೂರು: ತಾಲೂಕಿನಲ್ಲಿ 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮೆಕ್ಕೆಜೋಳ 35 ಸಾವಿರ ಹೆ., ರಾಗಿ 4400 ಹೆ., ತೊಗರಿ 3100 ಹೆ., ಶೇಂಗಾ 7400 ಹೆ., ಹತ್ತಿ 1025 ಹೆ., ಸೂರ್ಯಕಾಂತಿ 650 ಹೆ. ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಕುರಿತು ವರದಿಯಾಗಿದೆ.
ಸುಮಾರು ನೂರು ವರ್ಷಗಳಲ್ಲಿ 75 ವರ್ಷಗಳ ಕಾಲ ಬರಗಾಲ ಕಂಡ ಅತ್ಯಂತ ಹಿಂದುಳಿದ ತಾಲೂಕು ಜಗಳೂರು. ಇಲ್ಲಿ ಯಾವುದೇ ನದಿ, ನೀರಿನ ಮೂಲಗಳಿಲ್ಲ. ಸದ್ಯದ ಸ್ಥಿತಿಯಲ್ಲಿ 10ರಿಂದ 20 ಗ್ರಾಮಗಳಲ್ಲಿ ನೀರಿನ ಅಭಾವ ಇದೆ.
ಜಗಳೂರು ತಾಲೂಕಿಗೆ ಶಾಶ್ವತ ಯೋಜನೆಗಳು ಬೇಕಾಗಿವೆ. ಪ್ರತಿ ವರ್ಷವೂ ಬರಗಾಲಕ್ಕೆ ತುತ್ತಾದರೆ ತಾಲೂಕಿನ ಜನರ ಜೀವನ ತುಂಬ ಕಷ್ಟವಾಗಲಿದೆ. ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ.
ತೋರಣಗಟ್ಟೆ ತಿಪ್ಪೇಸ್ವಾಮಿ, ಅಧ್ಯಕ್ಷರು, ಭದ್ರಾ ಮೇಲ್ದಂಡೆ ಹೋರಾಟ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net