ಭಾರತೀಯ ಸಂಸ್ಕೃತಿಯ ಅನಾವರಣ

Shoping Mall 1
Published on

ಹುಬ್ಬಳ್ಳಿ: ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನಪ್ರಿಯ ಸೌಥ್ ಇಂಡಿಯಾ ಶಾಪಿಂಗ್ ಮಾಲ್ ತನ್ನ 35ನೇ ಶೋ ರೂಂ ಅನ್ನು ಇಲ್ಲಿಯ ಗೋಕುಲ ರಸ್ತೆ ಬಳಿ ಕನ್ನಡ ಖ್ಯಾತ ಚಿತ್ರನಟಿ ರಚಿತಾರಾಮ್ ಬುಧವಾರ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಸೌಥ್ ಇಂಡಿಯಾ ಶಾಪಿಂಗ್ ಮಾಲ್‌ನ ಭಾಗವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಇವರ ಕಲೆಕ್ಷನ್‌ಗಳು ಸಾಂಪ್ರದಾಯಿಕ ರೇಷ್ಮೆಯಿಂದ ಆಧುನಿಕ ಎಂಸೆಂಬಲ್‌ವರೆಗೆ ಭಾರತೀಯ ಸಂಸ್ಕೃತಿಯ ಸೌಂದರ್ಯದ ನಿಜವಾದ ಸಂಭ್ರಮಾಚರಣೆಯ ಸಂಕೇತವಾಗಿದೆ. ಅವರು ಕಡಿಮೆ ದರದಲ್ಲಿ ಸಂಪೂರ್ಣ ಹೊಸ ಶ್ರೇಣಿಯ ವೈವಿಧ್ಯತೆಯನ್ನು ಸಂಯೋಜಿಸಿರುವುದರಿಂದ ಪ್ರಭಾವಿತಳಾಗಿದ್ದೇನೆ. ಪ್ರತಿಯೊಬ್ಬ ಗ್ರಾಹಕರು ತಮ್ಮ ಸ್ಟೈಲ್ ಅನ್ನು ರಾಜಿ ಮಾಡಿಕೊಳ್ಳದೆ ತಮಗಿಷ್ಟವಾದ ವಸ್ತ್ರಗಳನ್ನು ಪಡೆದುಕೊಳ್ಳಬಹುದಾದ ತಾಣ ಇದಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಕರ್ನಾಟಕದಲ್ಲಿ ಮೊದಲ ಶಾಪಿಂಗ್ ಮಾಲ್ ಇದು. ನನಗೆ ತುಂಬಾ ಖುಷಿಯಾಗಿದೆ. ಇನ್ನೂ ಹಲವರು ಶಾಪಿಂಗ್ ಮಾಲ್‌ಗಳನ್ನು ಕರ್ನಾಟಕದಲ್ಲಿ ಆರಂಭಿಸಲು ಮಾಲೀಕರು ಉತ್ಸುಕರಾಗಿದ್ದಾರೆ. ನಾಲ್ವರು ಯುವಕರು ಸೇರಿ ಆರಂಭಿಸಿರುವುದು ಸಂತೋಷ. ದೀಪಾವಳಿ, ಮದುವೆ ಸೀಸನ್‌ಗೆ ಖರೀದಿಸಲು ದೊಡ್ಡ ಅಂಗಡಿ ಇದು. ಸಾವಿರಕ್ಕೂ ಹೆಚ್ಚು ರಿಯಾಯಿತಿಗಳನ್ನು ನೀಡಲಾಗಿದೆ. ಗುಣಮಟ್ಟದ, ಅಂದದ ಸೀರೆಗಳು ಇಲ್ಲಿವೆ. ಆಫರ್‌ಗಳು ಯಥೇಚ್ಛವಾಗಿವೆ. ಕೈಗೆಟಕುವ ದರಗಳು ಇಲ್ಲಿವೆ ಎಂದರು.

ಶಾಪಿಂಗ್ ಮಾಲ್ ಅಧ್ಯಕ್ಷ ಪೊಟ್ಟಿ ವೆಂಕಟೇಶ್ವರಲು ಮಾತನಾಡಿ, ನಮ್ಮ 35ನೇ ಶೋ ರೂಂನೊಂದಿಗೆ ಕರ್ನಾಟಕಕ್ಕೆ ಕಾಲಿಟ್ಟಿರುವುದು ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣ ಇದಾಗಿದೆ. ಹುಬ್ಬಳ್ಳಿಯು ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಸೊಬಗನ್ನು ಸುಂದರವಾಗಿ ಪ್ರತಿಫಲಿಸುತ್ತದೆ. ನಮ್ಮ ಶಾಪ್‌ನಲ್ಲಿ ವಿಶಿಷ್ಟ ಶಾಪಿಂಗ್ ಅನುಭವವನ್ನು ಈ ಮೂಲಕ ಒದಗಿಸಲು ರೋಮಾಂಚನಗೊಂಡಿದ್ದೇನೆ ಎಂದರು.

ವ್ಯವಸ್ಥಾಪಕ ನಿರ್ದೇಶಕ ಸೀರ್ನಾ ರಾಜಮೌಳಿ ಮಾತನಾಡಿ, ಈ ಪ್ರಮುಖ ಶೋರೂಂ ಹಬ್ಬ, ಮದುವೆ ಮತ್ತು ಕುಟುಂಬದೊಂದಿಗೆ ಶಾಪಿಂಗ್ ಮಾಡಲು ಖುಷಿಕೊಡುತ್ತದೆ. ಗುಣಮಟ್ಟ ಮತ್ತು ರಿಯಾಯಿತಿ ದರದಲ್ಲಿ ಉಡುಪುಗಳು ಲಭ್ಯ ಇವೆ ಎಂದರು.

ಪೂರ್ಣಾವಧಿ ನಿರ್ದೇಶಕ ತಿರುವೀಧುಲ ಪ್ರಸಾದರಾವ್ ಮಾತನಾಡಿ, ನಮ್ಮ ಸಂಸ್ಕೃತಿ, ಸಂಪ್ರದಾಯದಿಂದ ಪಾಶ್ಚಿಮಾತ್ಯದವರೆಗೆ ಉಡುಪುಗಳ ಸಂಗ್ರಹ ಇಲ್ಲಿದೆ. ಹೊಸ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸವಿದೆ. ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಶೋ ರೂಂ ಲೋಕಾರ್ಪಣೆಗೊಳಿಸಲಾಗಿದೆ. ಎಲ್ಲ ಬಟ್ಟೆಗಳು ಒಂದೆ ಸೂರಿನಡಿಯಲ್ಲಿವೆ ಎಂದರು.

ಶೋ ರೂಂನಲ್ಲಿ ಕಾಂಚೀಪುರಂ ರೇಷ್ಮೆಯಿಂದ ಡಿಸೈನರ್ ಸೀರೆಗಳವರೆಗೆ ವ್ಯಾಪಕ ಶ್ರೇಣಿಯ ಸೀರೆಗಳನ್ನು ಮತ್ತು ಎಥ್ನಿಕ್, ವೆಸ್ಟರ್ನ್, ಇಂಡೋ-ಪಾಶ್ಚಿಮಾತ್ಯ ಸ್ಟೈಲ್‌ಗಳಲ್ಲಿ ಮಹಿಳೆಯರ ಉಡುಪು, ಪುರುಷರ ಉಡುಪು ಮತ್ತು ಮಕ್ಕಳ ಉಡುಪುಗಳಿವೆ. ಪ್ರತಿ ಸಂದರ್ಭದಲ್ಲೂ ಸರಿ ಹೊಂದುವ ಅತ್ಯುತ್ತಮ ಶಾಪಿಂಗ್ ಮಾಲ್ ಇದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net