ಕಳಪೆ ಬಿತ್ತನೆ ಬೀಜದಿಂದ ಸಲು ಶೂನ್ಯ

tubagere
Published on

ಬೆಳೆ ಬೆಳೆದ ರೈತ ಕಂಗಾಲು ಕಾನೂನು ಹೋರಾಟ ಮಾಡಿ ಎಂದ ಕಂಪನಿ

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಲಕ್ಷಾಂತರ ರೂಪಾಯಿ ವ್ಯಯಿಸಿ, ಪ್ರಾಣಿಗಳಿಂದ ಹಗಲು ರಾತ್ರಿ ಬೆಳೆ ರಕ್ಷಣೆ ಮಾಡಿ ಸಲಿಗಾಗಿ ಕಾದು ಕುಳಿತ ರೈತನಿಗೆ ಕಳಪೆಮಟ್ಟದ ಬೀಜದಿಂದ ಶೂನ್ಯ ಬೆಳೆ ಸಿಕ್ಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ತುರುವನಹಳ್ಳಿ ವಾಸುದೇವ್ ಎಂಬ ರೈತ ತನ್ನ 3ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದಾರೆ. ಮಳೆ ನಂತರ ಎತ್ತರ ಬೆಳೆದ ಜೋಳದಲ್ಲಿ ತೆನೆ ಬಂದರೂ ಕಾಳು ಕಟ್ಟದಿರುವುದು ಬೆಳಕಿಗೆ ಬಂದಿದೆ.
ಕಳೆದ 3 ತಿಂಗಳ ಹಿಂದೆ ತೂಬಗೆರೆಯ ಬಿತ್ತನೆ ಬೀಜ ಮಾರಾಟ ಅಂಗಡಿಯಲ್ಲಿ ಹೈದರಾಬಾದ್ ಸೀಡ್ಸ್-8199 ಮುಸುಕಿನ ಜೋಳದ ಬಿತ್ತನೆ ಬೀಜ ತಂದು ಬಿತ್ತಿದ್ದರು. ಒಂದು ಜೋಳದ ಕಡ್ಡಿಯೊಳಗೆ ಒಂದರಿಂದ ಎರಡು ತೆನೆ ಬರಬೇಕು. ಆದ್ರೆ, ಈ ಬಿತ್ತನೆ ಬೀಜದಲ್ಲಿ ಒಂದು ಕಡ್ಡಿಗೆ 4-5 ತೆನೆ ಬಂದಿವೆ. ಬಂದಿರುವ ತೆನೆಯಲ್ಲೂ ಕಾಳುಗಳು ಇಲ್ಲ. ಲಕ್ಷಾಂತರ ರೂ.ಬಂಡವಾಳ ಹಾಕಿ ಬೆಳೆದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಕೋರ್ಟ್‌ಗೆ ಹೋಗಿ ಎಂದ ಮಾರಾಟಗಾರ: ಬಿತ್ತನೆ ಬೀಜ ಕೊಳ್ಳುವಾಗಲೇ ಕಂಪನಿಯವರು ನಷ್ಟವಾದರೆ ನಾವು ಹಣ ಕೊಡುತ್ತೇವೆ. ಇದನ್ನು ಕಣ್ಮುಚ್ಚಿ ಬಿತ್ತಿ ಎಂದು ಭರವಸೆ ನೀಡಿದ್ದರು. ಈಗ ಶೂನ್ಯ ಸಲು ಕುರಿತು ಕಂಪನಿಯವರಿಗೆ ತಿಳಿಸಿದರೆ ಪರಿಹಾರ ಕೊಡುವುದಿಲ್ಲ, ಬೇಕಾದರೆ ಕೋರ್ಟ್‌ಗೆ ಹೋಗಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, 3 ತಿಂಗಳು ರೈತ ಕಷ್ಟ ಪಟ್ಟು ಬೆಳೆದ ಬೆಳೆಗೆ ಲಪ್ರದವಿಲ್ಲದೆ ಇದೀಗ ರೈತ ಪರಿಹಾರಕ್ಕೆ ಎದುರು ನೋಡುವ ಪರಿಸ್ಥಿತಿ ಎದುರಾಗಿದೆ.

ಒಟ್ಟಾರೆ ಬಯಲು ಸೀಮೆಯ ಪ್ರದೇಶದಲ್ಲಿ ರೈತ ಬೆಳೆ ಬೆಳೆಯುವುದಕ್ಕೆ ಹರಸಾಹಸ ಪಡಬೇಕು. ಇಂತಹ ಸನ್ನಿವೇಶದಲ್ಲಿ ರೈತನಿಗೆ ಈ ರೀತಿ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದವರ ವಿರುದ್ಧ ದೂರು ದಾಖಲಿಸಿ ನಷ್ಟಕ್ಕೆ ಒಳಗಾದ ರೈತನಿಗೆ ಸೂಕ್ತ ಪರಿಹಾರ ಒದಗಿಸಬೇಕು.
ವಿಜಯ್‌ಕುಮಾರ್, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net