ಸಿಟ್ಟು- ಜಾತಿ ವೈಷಮ್ಯದಿಂದ ನಡೆಯದಿರಲಿ ಅಹಿತಕರ ಘಟನೆ

mnd
Published on

ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಇತ್ತೀಚೆಗೆ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ದಲಿತ ಸಮುದಾಯದ ಮಂಜುನಾಥ ಭೋವಿ ಕುಟುಂಬದವರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಶುಕ್ರವಾರ ಪರಿಹಾರ ಚೆಕ್ ವಿತರಿಸಿದರು.

ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಘಟನೆಯ ಬಗ್ಗೆ ಮಾಹಿತಿ ಪಡೆದಕೊಂಡರು. ಸಿಟ್ಟು ಅಥವಾ ಜಾತಿ ವೈಷಮ್ಯದಿಂದ ಇಂತಹ ಘಟನೆಗಳು ನಡೆಯಬಾರದು ಎಂದರು.

ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಸಾವಿರ ರೂ.ಪರಿಹಾರ ಧನ ನೀಡಲಾಗುತ್ತಿದೆ. ಮೃತನ ಪತ್ನಿಗೆ ಪ್ರತಿ ತಿಂಗಳು 6500ರೂ. ಭದ್ರತಾ ಪಿಂಚಣಿ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುವುದು ಎಂದರು.

ಮನೆಗೆ ವಿದ್ಯುತ್ ಸೌಲಭ್ಯ, ಶೌಚಗೃಹ ವ್ಯವಸ್ಥೆ ಮಾಡಿಸಿ ಕೊಡಲು ಅಧಿಕಾರಿಗಳಿಗೆ ಸೂಚಿಸಿದರು. ಉಪವಿಭಾಗಾಧಿಕಾರಿ ದೇವರಾಜ್, ತಹಸಿಲ್ದಾರ್ ಶಂಕರ ಗೌಡಿ, ತಾ.ಪಂ ಅಧಿಕಾರಿ ವೈ.ಟಿ. ದಾಸನಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದಯ್ಯನವರ, ಸಿಪಿಐ ಬಿ.ಎಸ್. ಲೋಕಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net