ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ

Untitled design (3)
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪೂರ ಮಾತಾನಾಡಿದರು. ಗ್ರೇಡ್-2 ತಹಸೀಲ್ದಾರ್ ಕುಮಾರಸ್ವಾಮಿ, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಸಿಪಿಐ ಸುರೇಶ ತಳವಾರ, ಜೆಸ್ಕಾಂ ಎಇಇ ಪ್ರಕಾಶ ಪತ್ತೇನೂರು, ಪಿಎಸ್‌ಐ ಧನಂಜಯ ಇದ್ದರು.
Published on

ಕೂಡ್ಲಿಗಿ: ಗಣೇಶ ಆಯೋಜಕರಿಗೆ ಒಂದೇ ವೇದಿಕೆಯಲ್ಲಿ ಎಲ್ಲ ಇಲಾಖೆಗಳ ಅನುಮತಿ ನೀಡಲು ಅನುಕೂಲ ಕಲ್ಪಿಸಲಾಗುವುದು ಎಂದು ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗಣೇಶ ಹಬ್ಬವನ್ನು ಶಾಂತಿ, ಸಾಮರಸ್ಯದಿಂದ ಆಚರಿಸಬೇಕು. ಗಣೇಶ ಆಯೋಜಕರು ಸಂಘಟನೆಯ ಸದಸ್ಯರ ಪಟ್ಟಿಯನ್ನು ಠಾಣೆಗೆ ನೀಡಬೇಕು. ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಡಿಜೆ ಬಳಸುವಂತಿಲ್ಲ. ಮೆರವಣಿಗೆ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.


ಗ್ರೇಡ್- 2 ತಹಸೀಲ್ದಾರ್ ಕುಮಾರಸ್ವಾಮಿ, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಜೆಸ್ಕಾಂ ಎಇಇ ಪ್ರಕಾಶ್ ಪತ್ತೇನೂರು, ಸಿಪಿಐ ಸುರೇಶ ತಳವಾರ , ಪಿಎಸ್‌ಐ ಧನಂಜಯ, ನಾಗರಿಕ ಹಿತ ರಕ್ಷಣೆ ವೇದಿಕೆ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪಪಂ ಸದಸ್ಯ ಸಿರಬಿ ಮಂಜುನಾಥ, ಮುಖಂಡರಾದ ಹಿರೇಕುಂಬಳಗುಂಟೆ ಉಮೇಶ, ಹಡಗಲಿ ವೀರಭದ್ರಪ್ಪ, ಸಿ.ಬಿ.ಜಯರಾಮ್, ವೆಂಕಟೇಶ, ಭರತ್ ರಾಮ್, ಗುರಿಕಾರ ರಾಘವೇಂದ್ರ, ಉಗ್ರಂ ಕಿಟ್ಟಿ, ರಹಿಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net