ಅರ್ಬನ್ ಬ್ಯಾಂಕ್‌ನಿಂದ ಅನುಪಮ ಸೇವೆ

akkialuru t
Published on

ಅಕ್ಕಿಆಲೂರ: ಆರ್ಥಿಕ ಶಿಸ್ತು ತಿಳಿಸಿ, ಸಾಮಾಜಿಕ ಕಳಕಳಿಯ ಮೂಲಕ ಅರ್ಬನ್ ಬ್ಯಾಂಕ್ ಶತಮಾನೋತ್ಸವ ಆಚರಿಸುತ್ತಿರುವುದು ಗಮನಾರ್ಹ ಎಂದು ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಅರ್ಬನ್ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದ ಎರಡನೇ ದಿನವಾದ ಭಾನುವಾರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 100 ವರ್ಷಗಳ ಹಿಂದೆ ಈ ಭಾಗದಲ್ಲಿ ಆರಂಭವಾದ ಅರ್ಬನ್ ಬ್ಯಾಂಕ್, ಹಣ ಮಾಡಲು ಹಣ ನೀಡದೆ ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಆರ್ಥಿಕ ಕಲ್ಯಾಣಕ್ಕಾಗಿ ಶ್ರಮಿಸಿದೆ. ಬ್ಯಾಂಕ್‌ನ ತ್ಯಾಗ ಮತ್ತು ಸೇವೆ ಅವಿಸ್ಮರಣೀಯ ಎಂದರು.

ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಸಹಕಾರ ಚಳವಳಿ ಆರಂಭವಾಗಿತ್ತು. ಆದರೆ ಅದರ ಅನುಷ್ಠಾನ ಅಗತ್ಯವಿತ್ತು. ಅದನ್ನು ಜಾರಿಗೊಳಿಸುವಲ್ಲಿ ಅನೇಕ ಹಿರಿಯರ ಸೇವೆ ಅನನ್ಯವಾಗಿದೆ ಎಂದರು.

ಬ್ಯಾಂಕ್ ಮ್ಯಾನೇಜರ್ ಎಸ್.ಎಸ್. ಬೊಮ್ಮಿಗಟ್ಟಿ ವರದಿ ವಚನ ಮಾಡಿದರು. ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗೈದ ಮಹನೀಯರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ನಂತರ ನಮ್ಮ ಊರು, ನಮ್ಮ ಬ್ಯಾಂಕ್ ಕುರಿತು ವಿಚಾರಗೋಷ್ಠಿ ಜರುಗಿತು. ಸಂಜೆ ಸಮಾರೋಪ ಸಮಾರಂಭದ ಮೂಲಕ ಶತಮಾನೋತ್ಸವದ ಮುಕ್ತಾಯಗೊಂಡಿತು. ಅಹೋರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಮಾಜಿ ಶಾಸಕ ಶಿವರಾಜ ಸಜ್ಜನವರ, ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಎಂ.ಕೆ. ಬಾಬಜಿ, ಸಿದ್ರಾಮಪ್ಪ ವಿರುಪಣ್ಣನವರ, ಬಸವರಾಜ ಕೋರಿ, ನಾಗರಾಜ ಪಾವಲಿ, ಮಲ್ಲಿಕಾರ್ಜುನ ಕಂಬಾಳಿ, ಕಾರ್ತಿಕ ಶೆಟ್ಟಿ, ವಿ.ಎಸ್. ದಾಡ್ಮಿ, ಬಾನಪ್ಪ ಲಮಾಣಿ, ನಾಗರಾಜ ವಿರುಪಣ್ಣನವರ, ವೀರಭದ್ರಪ್ಪ ತುಪ್ಪಿನ, ಮಲ್ಲಪ್ಪ ಕುರಬರ, ಕವಿತಾ ಕನ್ನೇಶ್ವರ, ಸವಿತಾ ಕೂಬಿಹಾಳ, ವಿದ್ಯಾ ಮಿರ್ಜಿ, ಲೀಲಾವತಿ ಯಲಿವಾಳ, ಎಂ.ಇ. ಮೋಟಗಿ, ಐಶ್ವರ್ಯ ಜವಳಿ, ವಿ.ಆರ್. ಶಿರೂರ ಉಪಸ್ಥಿತರಿದ್ದರು.

ಅರ್ಬನ್ ಬ್ಯಾಂಕ್ ಹಣ ಮಾಡುವ ಉದ್ದೇಶದಿಂದ ಆರಂಭಿಸಿದ ಸಂಸ್ಥೆಯಲ್ಲ. ಜನಸಾಮಾನ್ಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ಕರೆತರುವ ಗುರಿ ನಮ್ಮದು. ಶತಮಾನೋತ್ಸವ ಸ್ಮರಣಿಯಗೊಳಿಸಬೇಕೆಂಬ ಕನಸು ನನಸಾಗಿದೆ. ಅರ್ಥಪೂರ್ಣ ಸಮಾರಂಭ ಮಾಡಿದ ಧನ್ಯತೆ ಇದೆ.I ಷಣ್ಮುಖಪ್ಪ ಮುಚ್ಚಂಡಿ, ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net