ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ರೂ. ಮಾಸಾಶನ ನೀಡಿ, ಉಪತಹಸೀಲ್ದಾರ್‌ಗೆ ಸಿಪಿಎಂ ಮುಖಂಡರ ಮನವಿ

140420 Siriguppa CPIM Appeal to Tahasildar
Published on

ಸಿರಗುಪ್ಪ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ರೂ. ಮಾಸಾಶನ ನೀಡಬೇಕೆಂದು ಒತ್ತಾಯಿಸಿ ಉಪ ತಹಸೀಲ್ದಾರ್ ಉಮಾಮಹೇಶ್ವರಗೆ ಸಿಪಿಎಂ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಎಚ್.ತಿಪ್ಪಯ್ಯ ಮಾತನಾಡಿ, ಕರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದು, ತಾಲೂಕಿನ ಸಾವಿರಾರು ಅಸಂಘಟಿತ ಕಾರ್ಮಿಕರು ಕೂಲಿ ಇಲ್ಲದೆ ನಿರ್ಗತಿಕರಾಗಿ ಉಳಿದಿದ್ದಾರೆ. ಕೆಲಸವಿಲ್ಲದೆ ಆರ್ಥಿಕವಾಗಿ ಕಂಗೆಟ್ಟಿದ್ದು, ಕೂಡಲೆ ಸರ್ಕಾರ ಅಸಂಘಟಿತ ಕೂಲಿ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎಚ್.ಬಿ.ಓಬಳೇಶ್ವರಪ್ಪ, ಈರಣ್ಣ, ನೀಲಪ್ಪ, ಮಾರುತಿ, ಸುರೇಶ, ಈರಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net