ಶೋಷಣೆಗೆ ಒಳಗಾಗುತ್ತಿರುವ ಅಸಂಘಟಿತರು: ಚಂದ್ರಶೇಖರ್ ಮೇಟಿ ಬೇಸರ

4
Published on

ಮೈಸೂರು: ಅಸಂಘಟಿತ ಕಾರ್ಮಿಕರು ಸಂಘಟಿತರಾಗದ ಕಾರಣದಿಂದಾಗಿ ಶೋಷಣೆಗೆ ಒಳಗಾಗಿದ್ದಾರೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ್ ಮೇಟಿ ವ್ಯಕ್ತಪಡಿಸಿದರು.
ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಸಂಯೋಜಿತವಾಗಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಮೈಸೂರು ಜಿಲ್ಲಾ ಸಮಿತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.
ದೇಶಾದ್ಯಂತ ಅತಿ ದೊಡ್ಡ ಸಂಖ್ಯೆಯಲ್ಲಿ ಇರುವ ಅಸಂಘಟಿತ ಕಾರ್ಮಿಕರು ಒಗ್ಗಟ್ಟಾದರೆ ಅದೊಂದು ಬಹುದೊಡ್ಡ ಶಕ್ತಿ ಆಗಲು ಸಾಧ್ಯ. ಆದರೆ ಅಸಂಘಟಿತ ಕಾರ್ಮಿಕರು ಸಂಘಟಿತರಾಗದ ಕಾರಣದಿಂದಾಗಿ ಶೋಷಣೆಗೆ ಒಳಗಾಗಿದ್ದಾರೆ. ಆದ್ದರಿಂದ ಸಂಘಟಿತರಾಗಲು ಮುಂದಾಗಬೇಕು. ಅಂತಹ ಸಂಘಟನೆಯ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಯಶೋಧರ್ ಮಾತನಾಡಿ, ಕಾರ್ಮಿಕರಿಗೆ ಹಲವಾರು ಸೌಲಭ್ಯಗಳಿದ್ದರೂ ಅದು, ಕಲ್ಯಾಣ ಮಂಡಳಿಯಲ್ಲಿರುವ ಭ್ರಷ್ಟಾಚಾರ ಹಾಗೂ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ನೈಜ ಕಾರ್ಮಿಕರಿಗೆ ತಲುಪುತ್ತಿಲ್ಲ. ಹಾಗಾಗಿ ಒಂದು ಬಲಿಷ್ಠ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಪದಾಧಿಕಾರಿಗಳ ಆಯ್ಕೆ:
ಜಿಲ್ಲಾ ಅಧ್ಯಕ್ಷರಾಗಿ ಎಸ್.ಎಚ್.ಹರೀಶ್, ಉಪಾಧ್ಯಕ್ಷರಾಗಿ ರಾಜು ದೊಡ್ಡಕಾನ್ಯ, ರಮೇಶ್ ಕಡಕೊಳ, ಕಾರ್ಯದರ್ಶಿಯಾಗಿ ಸಿದ್ದಯ್ಯ ಹುಲ್ಲಹಳ್ಳಿ, ಜಂಟಿ ಕಾರ್ಯದರ್ಶಿಯಾಗಿ ಶಿವರಾಜ್ ಕಣೆನೂರು, ಕುಮಾರ್ ಮೈಸೂರು ನೇಮಕಗೊಂಡರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆಂಪಣ್ಣ ದೊಡ್ಡಕಾನ್ಯ, ಮಂಜುಳಾ ರಾಜೀವ್‌ನಗರ, ರಾಜಶೇಖರ್ ಮಾರ್ಬಳ್ಳಿ, ಮಹೇಶ್ ಸುಣ್ಣದಕೇರಿ, ನವೀನ್ ಏಚಗಳ್ಳಿ, ಮಲ್ಲಿಕಾರ್ಜುನ್ ಹುಲ್ಲಹಳ್ಳಿ ಅವರನ್ನು ನೇಮಕ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net