ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ಗೆ ಅವಿರೋಧ ಆಯ್ಕೆ

SRP_14-01jpj
ಶ್ರೀರಂಗಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಬ್ಬನಕುಪ್ಪೆ ಎಸ್.ಎಂ.ನಾಗರಾಜು, ಬಸ್ತೀಪುರ ಎಲ್.ನಾಗರಾಜು ಅವರೊಂದಿಗೆ ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ ಸಮ್ಮುಖದಲ್ಲಿ ಸಂಘದ ನಿರ್ದೇಶಕರು, ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರು ಅಭಿನಂದಿಸಿದರು.
Published on

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘ(ಟಿಎಪಿಸಿಎಂಎಸ್)ದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಸಬ್ಬನಕುಪ್ಪೆ ಎಸ್.ಎಂ.ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ಬಸ್ತೀಪುರ ಎಲ್.ನಾಗರಾಜು ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಸಂಘದ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 12 ಸದಸ್ಯರಲ್ಲಿ ಈ ಇಬ್ಬರು ಹೊರತುಪಡಿಸಿ ಬೇರಾರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಚೇತನಾ ಯಾದವ್ ಫಲಿತಾಂಶ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಿದರು.

ಟಿಎಪಿಸಿಎಂಎಸ್ ಆಡಳಿತ ಮಂಡಳಿಯ 5 ವರ್ಷದ ಅಧಿಕಾರದ ಅವಧಿಗೆ ಅ.4ರಂದು ನಡೆದ ಚುನಾವಣೆಯಲ್ಲಿ ವಿಎಸ್‌ಎಸ್‌ಎನ್ ಸೊಸೈಟಿಯ ಕ್ಷೇತ್ರ ಎ ತರಗತಿಯಿಂದ 4 ಹಾಗೂ ಷೇರು ಮತದಾರರ ಕ್ಷೇತ್ರ ಬಿ ತರಗತಿಯಿಂದ 8 ಸ್ಥಾನ ಸೇರಿದಂತೆ ಒಟ್ಟು 12 ನಿರ್ದೇಶಕರ ಸ್ಥಾನಗಳಲ್ಲಿ 12 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು ನಿರ್ದೇಶಕರಾಗಿದ್ದರು. ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ನಿರ್ದೇಶನ ಹಾಗೂ ಎಲ್ಲ ನಿರ್ದೇಶಕರ ಒಮ್ಮತದ ನಿಲುವಿನ ಹಿನ್ನೆಲೆಯಲ್ಲಿ ಯಾರು ನಾಮಪತ್ರ ಸಲ್ಲಿಸದ ಕಾರಣ ಆಯ್ಕೆ ಪ್ರಕ್ರಿಯೆಯನ್ನು ಉಪ ಚುನಾವಣಾಧಿಕಾರಿ ರವಿ ಪೂರ್ಣಗೊಳಿಸಿದರು. ನಿಕಟಪೂರ್ವ ಅಧ್ಯಕ್ಷ ಎಂ.ನಂದೀಶ್ ಎಲ್ಲ ನಿರ್ದೇಶಕರು ಹಾಗೂ ಚುನಾವಣಾಧಿಕಾರಿ ಸಮ್ಮುಖದಲ್ಲೇ ಅಧಿಕಾರವನ್ನು ಹಸ್ತಾಂತರಿಸಿದರು.

ಬಳಿಕ ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಹಾಗೂ ನೂತನ ಪದಾಧಿಕಾರಿಗಳ ಬೆಂಬಲಿಗರು ಸಂಘದ ಆವರಣದಲ್ಲಿ ಎಲ್ಲರಿಗೂ ಹೂಮಾಲೆ ಹಾಕಿ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

ಬಳಿಕ ನೂತನ ಅಧ್ಯಕ್ಷ ಸಬ್ಬನಕುಪ್ಪೆ ಎಸ್.ಎಂ.ನಾಗರಾಜು ಮಾತನಾಡಿ, ಟಿಎಪಿಸಿಎಂಎಸ್ ಜನಪರ ಆಡಳಿತಕ್ಕೆ ಶಾಸಕರಿಗೆ ಶಕ್ತಿ ನೀಡಿದ ಮಾತೃ ಸಂಸ್ಥೆಯಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಷೇರುದಾರರು ಹಾಗೂ ಸಂಘದ ಅಭಿವೃದ್ಧಿ ಮೂಲಕ ಮಾದರಿ ಸಂಸ್ಥೆಯನ್ನಾಗಿಸಲು ಶ್ರಮಿಸಲಾಗುತ್ತದೆ. ಪ್ರಸಕ್ತ ಸಾಲಿನಿಂದ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಕ್ಷೇತ್ರದ ಜನರ ಉಪಯೋಗಕ್ಕೆ ಬಳಕೆಯಾಗುತ್ತವಂಥ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ಮೂಲಕ ಶ್ರಮಿಸಲಾಗುವುದು ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ತಡಗವಾಡಿ ಟಿ.ಕೆ.ಯತೀಶ್, ಕೆ.ಜೆ.ರವಿಶಂಕರ್, ಎಸ್.ಜೆ.ವೆಂಕಟರಾಮು, ಎಂ.ನಂದೀಶ್, ಬಿ.ಎಸ್.ಸಂದೇಶ್, ಬಿ.ಎಸ್.ಚಂದ್ರಶೇಖರ್, ಶಿವಯ್ಯ, ಎಚ್.ಸಿ.ಸುವಿತಾ, ಪದ್ಮಮ್ಮ, ಪುರಸಭಾ ಪ್ರಭಾರ ಅಧ್ಯಕ್ಷ ಎಂ.ಎಲ್. ದಿನೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನೆಲಮನೆ ಚಲುವೇಗೌಡ, ನಿರ್ದೇಶಕ ಟಿ.ಎಂ.ಮಹದೇವು, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ಸಾಗರ ಎಂ.ಬಿ.ಕುಮಾರ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಹೊಸಹಳ್ಳಿ ಕೃಷ್ಣಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net