ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿಗೆ ಅವಿರೋಧ ಆಯ್ಕೆ

ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ. ಬಿ.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಕುಪ್ಪರವಳ್ಳಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು.
ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ. ಬಿ.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಕುಪ್ಪರವಳ್ಳಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು.
Published on

ಕಲ್ಕುಂದ: ನಂಜನಗೂಡು ತಾಲೂಕಿನ ಬಿಳಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ. ಬಿ.ಚಂದ್ರಶೇಖರ್, ಉಪಾಧ್ಯಕ್ಷರಾಗಿ ಕುಪ್ಪರವಳ್ಳಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು.

ಬಿಳಿಗೆರೆ ಸಹಕಾರ ಸಂಘವನ್ನು ಮಾದರಿಯನ್ನಾಗಿಸಲು ನಿರ್ದೇಶಕರ ಸಹಕಾರ ಅಗತ್ಯ. ಜತೆಗೆ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ರೈತರ ಏಳಿಗೆಗಾಗಿ ಶ್ರಮಿಸಲಾಗುವುದು ಎಂದು ಚಂದ್ರಶೇಖರ್, ಸೋಮಣ್ಣ ಹೇಳಿದರು.

ಸಂಘದ ನಿರ್ದೇಶಕರಾದ ಮಹದೇವಸ್ವಾಮಿ, ಸೋಮಣ್ಣ ಬಿಳಿಗೆರೆ, ಶೇಖರಪ್ಪ ಕಹಳ್ಳಿ, ಗುರುಮಲ್ಲೇಗೌಡ, ಪಚ್ಚತಾಯಮ್ಮ, ನಾಗರತ್ನಮ್ಮ, ಕೆ.ಎಸ್.ಪುಟ್ಟಬುದ್ದಿ, ಮಹದೇವು, ಕೆಂಪರಾಜು, ಚಿಕ್ಕಿಗೌಡ, ಚುನಾವಣಾಧಿಕಾರಿ ರಮೇಶ್, ಸಿಇಒ ಎಚ್. ಎಲ್.ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net