ಅವಿರೋಧ ಆಯ್ಕೆ

5ATHANIGRAMIN1
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕರ್ಲಟ್ಟಿ ಗ್ರಾಮದ ಶ್ರೀ ಶಿವಯೋಗಿ ಮುರುಘೇಂದ್ರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಅಪ್ಪಣ್ಣ ಇಂಚಲಕರಂಜಿ, ಉಪಾಧ್ಯಕ್ಷರಾಗಿ ಬಸವರಾಜ ಮೊಕಾಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಣ್ಣಪ್ಪ ಸವದಿ ಘೋಷಿಸಿದರು.

ಸದಸ್ಯರಾದ ಕಾಡಪ್ಪ ತಾಂವಶಿ, ಧರ್ಮಣ್ಣ ತೇರದಾಳ, ಶಂಕರ ಇಂಗಳಿ, ಪಾರೀಸ್ ಬೇಟಕಾಳೆ, ವಸಂತ ಹೂಗಾರ, ಸಂಜು ಕಾರೆ, ಹನುಮಂತ ತೆಲಸಂಗ, ಸುಲೋಚನ ಚೌಗಲಾ, ರತ್ನವ್ವ ಮೊಕಾಶಿ ಮುಖಂಡರಾದ ರಮೇಶ ಮೊಕಾಶಿ, ಮುರಗೇಶ ಮುಧೋಳ, ಮುರಗೇಶ ಮೊಕಾಶಿ, ಮುಖ್ಯ ಕಾರ್ಯನಿರ್ವಾಹಕ ವಿಶ್ವಾಸ ಬೆಡಗ, ಬ್ಯಾಂಕ್ ನಿರೀಕ್ಷಕ ಶಿವಾನಂದ ಢವಳೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net