ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ಗೆ ಅವಿರೋಧ ಆಯ್ಕೆ

Unopposed election to Vijaya Mahantesh Cooperative Bank
ಹುನಗುಂದ ಪಟ್ಟಣದ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷೆ ಶಕುಂತಲಾ ಗಂಜಿಹಾಳ ಹಾಗೂ ಉಪಾಧ್ಯಕ್ಷ ಸೋಮಶೇಖರ ಬಲಕುಂದಿ ಅವರನ್ನು ಸತ್ಕರಿಸಲಾಯಿತು. ನಿರ್ದೇಶಕರಾದ ಮಹಾಂತೇಶ ಅವಾರಿ, ಮಂಜುನಾಥ ಆಲೂರ, ದೇವು ಡಂಬಳ ಇದ್ದರು.
Published on

ಹುನಗುಂದ: ಪಟ್ಟಣದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಶಕುಂತಲಾ ಗಂಜಿಹಾಳ ಹಾಗೂ ಉಪಾಧ್ಯಕ್ಷರಾಗಿ ಸೋಮಶೇಖರ ಬಲಕುಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಬ್ಯಾಂಕ್ ಕಚೇರಿಯಲ್ಲಿ ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ದಾನಯ್ಯ ಹಿರೇಮಠ ತಿಳಿಸಿದ್ದಾರೆ.

ನಿರ್ದೇಶಕರಾದ ಮಂಜುನಾಥ ಆಲೂರ, ಶಕುಂತಲಾ ಬೆಲ್ಲದ, ರವಿ ಹುಚನೂರ, ಮಹಾಂತೇಶ ಅವಾರಿ, ನೀಲಪ್ಪ ಮುಕ್ಕಣ್ಣವರ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಶಿವಾನಂದ ಕಂಠಿ, ಬಸವರಾಜ ಹೊಸೂರ, ನೀಲಪ್ಪ ತಪೇಲಿ, ತಿಪರೆಡ್ಡೆಪ್ಪ ನಾಗರಾಳ, ರಾಜಕುಮಾರ ಬಾದವಾಡಗಿ, ಶರಣಪ್ಪ ಹೊಸೂರ, ರಾಜು ನಾಡಗೌಡರ, ಮುತ್ತಣ್ಣ ಕಲಗೋಡಿ, ತಿರುಪತಿ ಕುಷ್ಟಗಿ, ದೀಪಾ ಮಹಾಂತೇಶ ಸುಂಕದ, ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಆಲದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net