ಜಗಜ್ಯೋತಿ ಬಸವೇಶ್ವರ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

Unopposed election to Jagajyoti Basaveshwara Cooperative Society
Published on

ಗುತ್ತಲ: ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಚನ್ನಬಸಪ್ಪ ಚಕ್ಕಿ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಚಂದ್ರಶೇಖರಪ್ಪ ಮರಿಯಾನಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಸೆ.21ರಂದು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚನ್ನಬಸಪ್ಪ ಕೊಟ್ರಪ್ಪ ಚಕ್ಕಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ ಚಂದ್ರಶೇಖರಪ್ಪ ಮರಿಯಾನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸತೀಶಚಂದ್ರ ಚಕ್ರಸಾಲಿ ಅವಿರೋಧ ಆಯ್ಕೆಯನ್ನು ಘೊಷಿಸಿದರು.

ನಿರ್ದೇಶಕರಾದ ಶಿವಾನಂದ ಕೋರಿಶೆಟ್ಟರ, ಶಿವಯೋಗಿ ಹಾಲಗಿ, ಈರಣ್ಣ ವಿಭೂತಿ, ಶಂಭಣ್ಣ ಕುಪ್ಪೇಲೂರ, ಶಂಭುಲಿಂಗಪ್ಪ ಅರಳಿ, ಮಂಗಳಾ ಚನ್ನಬಸಪ್ಪ ಹರಿಹರ, ಗಾಯತ್ರಿ ಸಿದ್ದಲಿಂಗೇಶ ಮರಿಯಾನಿ, ರಾಘವೇಂದ್ರ ಅರ್ಕಸಾಲಿ, ಗಂಗಾಧರ ಭಟ್, ಸಲಹಾ ಸಮಿತಿ ಸದಸ್ಯ ಬಸವರಾಜ ನೀರಲಗಿ, ಮಾಜಿ ನಿರ್ದೇಶಕರಾದ ವಿಶ್ವನಾಥ ಮನ್ನಂಗಿ, ಚಂದ್ರಶೇಖರ ಹರಿಹರ(ಮುಷ್ಠಿ), ಮಾಲತೇಶ ಅಂಗಡಿ, ಶಿವಬಸಪ್ಪ ಅಂಗಡಿ, ಶಿವರಾಜಪ್ಪ ವಿಭೂತಿ, ಸಂಘದ ಕಾರ್ಯದರ್ಶಿ ಪ್ರಭುಕುಮಾರ ಅಂಕಲಕೋಟಿ, ಸಿಬ್ಬಂದಿ ಚಂದ್ರಶೇಖರ ಹರಿಹರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net