

ಗುಳೇದಗುಡ್ಡ: ಹಳದೂರು ಗ್ರಾಮ ಪಂಚಾಯಿತಿಗೆ ತೆರವಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರಾಗಿ ಬೂದಿನಗಡ ಗ್ರಾಮದ ಹನುಮವ್ವ ಸತ್ಯಪ್ಪ ಉಳ್ಳಾಗಡ್ಡಿ, ಉಪಾಧ್ಯಕ್ಷರಾಗಿ ಪಾದನಕಟ್ಟಿ ಗ್ರಾಮದ ಹನುಮಂತ ಮಲ್ಲಪ್ಪ ದನದಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
‘2ಎ’ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಹನುಮವ್ವ ಉಳ್ಳಾಗಡ್ಡಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತ ದನದಮನಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ತಿಳಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾಪಂ ಸದಸ್ಯರಾದ ಭೀರಪ್ಪ ಕುರಿ, ಈರಯ್ಯ ಹೊಸಮಠ, ಮುತ್ತವ್ವ ಕೊಳಮಲಿ, ಬಸವನಗೌಡ ಗೌಡರ, ಲಕ್ಷ್ಮಿವಾಲ್ಮೀಕಿ, ಲಚಮಪ್ಪ ನಾಗರಾಳ, ಸಾವಿತ್ರವ್ವ ಗುಡದಾರಿ, ಪಿಡಿಒ ಗೂಳಪ್ಪ ಹೊರಟ್ಟಿ ಉಪಸ್ಥಿತರಿದ್ದು, 6 ಜನ ಸದಸ್ಯರು ಗೈರು ಉಳಿದಿದ್ದರು.
ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.
ಮಹಾದೇವಪ್ಪ ಹಿರೇಮಠ, ಮುದಕಪ್ಪ ಹೊಸಮನಿ, ಚಂದಪ್ಪ ಡೊಳ್ಳಿ, ಬಸಪ್ಪ ಪಾಲ್ತಿ, ಯಮನಪ್ಪ ಪಾಲ್ತಿ, ಯಂಕಣ್ಣ ಭೀಮನಗಡೆ, ಯಮನಪ್ಪ ಗಾಬಿನ, ಮಲ್ಲಪ್ಪ ವಾಲಿಕಾರ, ಮುತ್ತಪ್ಪ ನಿಂಬಲಗುಂದಿ, ಮಲ್ಲನಗೌಡ ಪಾಟೀಲ, ನೀಲಕುಮಾರ ಬಳಬಟ್ಟಿ, ಸುರೇಶ ಕುರಿ, ತಿಪ್ಪಣ್ಣ ಗೌಡ್ರ, ಶಂಕರಗೌಡ ಗೌಡ್ರ, ಶಿವಲಿಂಗಪ್ಪ ಚಲವಾದಿ, ಆಸಂಗೆಪ್ಪ ಆಸಂಗಿ, ಮೃತ್ಯು ಸಾಧನಿ ಇತರರಿದ್ದರು.