ಛಲವಾದಿ ಮಹಾಸಭಾಕ್ಕೆ ಅವಿರೋಧ ಆಯ್ಕೆ

Unopposed election to Chhalavadi Mahasabha
ಛಲವಾದಿ ಮಹಾಸಭಾದ ಹುನಗುಂದ ತಾಲೂಕು ಘಟಕದ ಅಧ್ಯಕ್ಷರಾಗಿ ಶಿಕ್ಷಕ ಬಸವರಾಜ.ಆರ್.ಮಸ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ.ಎಚ್. ಹೊಸಮನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಾಗಲಕೋಟೆ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಟ್ಟು ನೀಲನಾಯಕ ಇದ್ದರು.
Published on

ಹುನಗುಂದ: ಛಲವಾದಿ ಮಹಾಸಭಾ (ಕೆ. ಶಿವರಾಮ್) ಬಣದ ಹುನಗುಂದ ತಾಲೂಕು ಅಧ್ಯಕ್ಷರಾಗಿ ನಿವತ್ತ ಶಿಕ್ಷಕ ಬಸವರಾಜ.ಆರ್.ಮಸ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ.ಎಚ್. ಹೊಸಮನಿ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಛಲವಾದಿ ಮಹಾಸಭಾದ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಹುನಗುಂದ ತಾಲೂಕು ಘಟಕದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಗುರುಬಸಪ್ಪ ಈಟಿ, ಉಪಾಧ್ಯಕ್ಷರಾಗಿ ಹನುಮಂತ ನಡುವಿನಮನಿ, ಗ್ಯಾನಪ್ಪ ಈಟಿ, ಗಂಗಾಧರ ಬದಾಮಿ, ಖಜಾಂಚಿಯಾಗಿ ಶ್ರೀಶೈಲಪ್ಪ ಚಲವಾದಿ (ಹುಲಿಗಿನಾಳ), ಕಾರ್ಯದರ್ಶಿಗಳಾಗಿ ರಾಜು ಈಟಿ, ರವಿ ಬಿ.ಮಸ್ಕಿ, ಬಸವರಾಜ ಹಿರೇಮನಿ, ಮಹಾಂತೇಶ ಎಚ್ ಚಲವಾದಿ(ಅಮರಾವತಿ), ಸಂಘಟನಾ ಕಾರ್ಯದರ್ಶಿಗಳಾಗಿ ದೇವು ಚಲವಾದಿ (ರಾಮವಾಡಗಿ), ಪರಸಪ್ಪ ಚಲವಾದಿ(ಹಿರೇಮಳಗಾವಿ), ಚಂದ್ರಶೇಖರ ಚಲವಾದಿ (ಹುಲಿಗಿನಾಳ), ಮಲ್ಲು ಚಲವಾದಿ (ಚಿತ್ತರಗಿ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ ಮಾತನಾಡಿ, 2008ರಲ್ಲಿ ನಿವತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಮ್ ಅವರು ಚಲವಾದಿ ಸಮಾಜದ ಸಂಘಟನೆಗಾಗಿ ವಿಶೇಷ ಕಾಳಜಿ ವಹಿಸಿ ಛಲವಾದಿ ಮಹಾಸಭಾವನ್ನು ಹುಟ್ಟು ಹಾಕಿದ್ದಾರೆ. ನಾವೆಲ್ಲರೂ ಸಂಘಟನೆ ಬಲಿಷ್ಠ ಗೊಳಿಸುವ ಮೂಲಕ ಸಮಾಜ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಮಹಾಸಭಾ ಉಪಾಧ್ಯಕ್ಷ ಸುಭಾಸ ಬಾದಾಮಿ ಮಾತನಾಡಿ, ಜಿಲ್ಲೆಯಲ್ಲಿ ಈ ಮೊದಲು ಕೆ. ಶಿವರಾಮ್ ಅವರು ಕಟ್ಟಿದ ಛಲವಾದಿ ಮಹಾಸಭಾ ಒಂದೇ ಇತ್ತು. ಸದ್ಯ ಎರಡಾಗಿವೆ. ಇದರ ಕುರಿತು ಗೊಂದಲ ಬೇಡ. ಸಮಾಜಕ್ಕೆ ಕೆ. ಶಿವರಾಮ್ ಅವರ ಕೊಡುಗೆ ಬಹಳಷ್ಟಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಟ್ಟು ನೀಲನಾಯಕ, ಶ್ರೀಧರ ಚಿಕ್ಕಲಕಿ, ಎಸ್.ವೈ.ನಾರಾಯಣಿ, ಸಿ.ಎಸ್.ಜೈ ಭೀಮ್, ನಿವತ್ತ ಶಿಕ್ಷಕ ಸಂಗಪ್ಪ ಧನ್ನೂರ, ಶಾಂತಪ್ಪ ಮಸ್ಕಿ, ಮುತ್ತಣ್ಣ ಮಸ್ಕಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net