

ಮಳವಳ್ಳಿ: ತಾಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ (ಬಿಳಿಯಪ್ಪ) ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದಲ್ಲಿನ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಉಪಾಧ್ಯಕ್ಷ ಎಂ.ಎಲ್.ಬಸವರಾಜು ನಿರ್ದೇಶಕರಾದ ಮಲ್ಲೇಶ, ಮರಿಮಾದಯ್ಯ, ಆರ್.ಸಿ.ವೆಂಕಟೇಶ್, ಎನ್.ಶೋಭಾ ಶಿವರಾಜು, ನಾಗಮ್ಮ, ಭಾರತಿ, ಸುರೇಶ, ಆರ್.ಕೆ.ನಾಗರಾಜು, ನಾಗಮ್ಮ, ಮುಖಂಡರಾದ ಶಿವಲಿಂಗಯ್ಯ, ನಾಗಯ್ಯ, ಶಿವರಾಜ್, ಕೆಂಪಣ್ಣ, ಮಹಾದೇವಪ್ಪ, ನಂಜುಂಡೇಗೌಡ, ಪುಟ್ಟರಾಜು, ಉಮೇಶ್, ಎಂ.ನಾಗಯ್ಯ, ಕಾರ್ಯದರ್ಶಿ ನಂಜುಂಡಸ್ವಾಮಿ ಇತರರಿದ್ದರು.