ಕಸಬಾ ಸೊಸೈಟಿಗೆ ಚುನಾವಣೆ: 11 ನಿರ್ದೇಶಕರು ಅವಿರೋಧ ಆಯ್ಕೆ

Unopposed election for Kasaba Society Mandya
Published on

ಮಂಡ್ಯ: ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ 11 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ಸಿ.ರವೀಂದ್ರ, ಬೋರೇಗೌಡ, ಎನ್.ನಾಗರಾಜು, ಬಿ. ಬೋರೇಗೌಡ, ಸಿ.ಬಿ. ಕೃಷ್ಣೇಗೌಡ, ಗೌರಮ್ಮ, ಸುನಂದಾ, ಡಿ.ಮೋಹನ, ಎಂ.ಆರ್. ಸಂದೀಪ, ರತ್ನಾ, ಕೆ.ಎಸ್.ಧರ್ಮೇಂದ್ರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಸೊಸೈಟಿ ಮಾಜಿ ಅಧ್ಯಕ್ಷ ಎಂ. ಕೃಷ್ಣ ಮಾತನಾಡಿ, ಐದು ವರ್ಷದ ಆಡಳಿತ ಮಂಡಳಿಯ ಚುನಾವಣೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಮಂಡ್ಯ ನಗರ, ಕಲ್ಲಹಳ್ಳಿ, ಹೊಸಹಳ್ಳಿ, ಚಿಕ್ಕೇಗೌಡನದೊಡ್ಡಿ, ಚಿಕ್ಕಮಂಡ್ಯ, ಚಿಂದಗಿರಿದೊಡ್ಡಿಯ ಸಹಕಾರಿ ಬಂಧುಗಳು ಸಹಕಾರ ನೀಡಿದ್ದಾರೆ. ಸಂಘಕ್ಕೆ ಆಯ್ಕೆ ಬಯಸಿ ಹಲವರು ಅರ್ಜಿ ಸಲ್ಲಿಸಿದ್ದರು. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಮುಖಂಡರು ಒಟ್ಟಾಗಿ ಸೇರಿ ನಾಮಪತ್ರಗಳನ್ನು ವಾಪಸ್ ಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದು ಯಶಸ್ವಿಯಾಗಿ ಎಲ್ಲ 11 ಜನ ನಿರ್ದೇಶಕರ ಅವಿರೋಧ ಆಯ್ಕೆಗೆ ಸಹಕಾರ ನೀಡಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಾಗಿದೆ. ನೂತನ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಸಲಹೆ ನೀಡಿದರು.

ಮಾಜಿ ಅಧ್ಯಕ್ಷರಾದ ಕೆ.ಎಸ್.ಆನಂದ್, ಎಂ.ರಮೇಶ್, ಕೆ.ಎಚ್.ಶಿವಲಿಂಗಯ್ಯ, ಚಿಕ್ಕಳ್ಳಿಗೌಡ, ನಗರಸಭೆ ಮಾಜಿ ಸದಸ್ಯ ಕೆ. ಗೂಳೀಗೌಡ, ಶಂಕರೇಗೌಡ, ಟಿ.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net