ಗುತ್ತಲ ಅರ್ಬನ್ ಸೊಸೈಟಿಗೆ ಅವಿರೋಧ ಆಯ್ಕೆ

25 GTL
Published on

ಗುತ್ತಲ: ಪಟ್ಟಣದ ಗುತ್ತಲ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸಿ.ಬಿ. ಕುರವತ್ತಿಗೌಡರ, ಉಪಾಧ್ಯಕ್ಷರಾಗಿ ಕೃಷ್ಣಾಜಿ ತೇಲ್ಕರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಸಿ.ಬಿ. ಕುರವತ್ತಿಗೌಡರ ನೇತೃತ್ವದ ಕಾಂಗ್ರೆಸ್ ಬೆಂಬಲಿತ ತಂಡದ ಎಲ್ಲ 9 ಜನ ಗೆದ್ದಿದ್ದರು ಹಾಗೂ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮಂಗಳವಾರ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾಗಿ ಪ್ರಕಾಶ ಹಿರಗೂಳಿ ಕಾರ್ಯ ನಿರ್ವಹಿಸಿದರು.

ನಿರ್ದೇಶಕರಾದ ಸಂಗಯ್ಯ ಸ್ವಾಮಿ ಭೂಸನೂರಮಠ, ರುದ್ರಪ್ಪ ಹಾದಿಮನಿ, ಮಂಜುನಾಥ ಅಡಗಂಟಿ, ನಾಗರಾಜ ಮಳಗಿ, ಮಂಜುನಾಥ ಹರಿಹರ, ಬಸಪ್ಪ ಇಚ್ಚಂಗಿ, ಚಮನಸಾಬ ಚೌದ್ರಿ, ದೇವಪ್ಪ ಜಾಲಮ್ಮನವರ, ಮಾಲತೇಶ ಕಿತ್ತೂರ ಭಾರತಿ ತೇಲ್ಕರ, ಹಾಲಮ್ಮ ಸಾಲಗೇರಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಪಪಂ ನಾಮ ನಿರ್ದೇಶಿತ ಸದಸ್ಯ ಪಿ.ಎನ್. ಹೇಮಗಿರಿಮಠ, ಪಿಕೆಪಿಎಸ್ ನಿರ್ದೇಶಕ ಅಶೋಕ ತೇಲ್ಕರ, ನಾಗಪ್ಪ ಸಾಲಗೇರಿ, ನಿವೃತ್ತ ಶಿಕ್ಷಕ ಪಿ.ಎನ್. ನೆಗಳೂರಮಠ, ವಿನೂತ ತೇಲ್ಕರ, ಕಾರ್ಯದರ್ಶಿ ಗುರುಶಾಂತಯ್ಯ ಬಿ. ಓದಿಸೋಮಠ, ಸಿಬ್ಬಂದಿ ಈರಮ್ಮ ಮೋರಗೇರಿ, ಶಿವಪ್ಪ ಹುಳ್ಳಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net